ಪ್ರಯಾಣ ದರ ಹೆಚ್ಚಳ : ಇಂಡಿಯಲ್ಲಿ ಎಬಿವಿಪಿ ಪ್ರತಿಭಟನೆ
ಇಂಡಿ : ಬಸ್ ಪ್ರಯಾಣ ದರ ಏರಿಕೆ ಮಾಡಿರುವದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಲ್ಲಿ ಮಾತನಾಡಿದ ಎಬಿವಿಪಿ ನಗರ ಕಾರ್ಯದರ್ಶಿ ಗಣೇಶ ಹಂಜಗಿ ಬಸ್ ಪ್ರಯಾಣ ದರ ಶೇ ೧೫ ರಷ್ಟು ಹೆಚ್ಚಿಸಿರುವದು ಖಂಡನೀಯ ಇದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತದೆ. ಯಾರಾದರೂ ವಿದ್ಯಾರ್ಥಿಗಳು ಇಂಟರ್ವಿವ್ ಸಂದರ್ಶನಗಳಿಗೆ ಹೋಗಲು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ. ಅದಲ್ಲದೆ ಎಲ್ಲ ದರಗಳು ಹೆಚ್ಚಿದ್ದು ಬಸ್ ದರ ಹೆಚ್ಚಿಸಿದರೆ ಸಾಮಾನ್ಯರ ಜೀವನ ದುಸ್ತರವಾಗುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ಸಚೀನ ದಾನಗೊಂಡ,ರಾಹುಲ್ ಜಾಧವ, ಮಹೇಶ ಮುನ್ನಳ್ಳಿ, ಅಂಬರೀಷ ಬಿರಾದಾರ,ದರ್ಶನ ಹರಿಜನ,ಸಂದೀಪ ಜೇವೂರ,ಸಂದೀಪ ಪರೀಟ,ಸಮರ್ಥ ಗಾಯಕವಾಡ,ಪ್ರತೀಕ ಹಂಜಗಿ,ಮಂಜುನಾಥ ಪೂಜಾರಿ, ರಾಮು ಹೂಗಾರ ಮತ್ತಿತರಿದ್ದರು.
ಶಾಂತೇಶ್ವರ ಪದವಿ ಮಹಾವಿದ್ಯಾಲಯ, ಮಿನಿ ವಿಧಾನಸೌಧ, ಬಸವೇಶ್ವರ ವೃತ್ತದ ಮೂಲಕ ಬಸ್ ನಿಲ್ದಾಣ ತೆರಳಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.