ಇಂಡಿ : ಸಾಲಭಾದೆ ತಾಳಲಾರದೆ ಮನನೊಂದು ರೈತನೋರ್ವ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅರ್ಜನಾಳ ಗ್ರಾಮದಲ್ಲಿ ನಡೆದಿದೆ. ಅಶೋಕ ಜೆಟ್ಟೆಪ್ಪ ಶಿಗಣಾಪುರ 52 ಮೃತಪಟ್ಟಿರುವ ದುರ್ದೈವಿ.
ಹಲಸಂಗಿ ಯೂನಿಯನ್ ಬ್ಯಾಂಕ್‌ನಲ್ಲಿ ₹ 2 ಲಕ್ಷ ಅರ್ಜನಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕ್ ₹65 ಸಾವಿರ, ಊರ ಮನಿಸಾಲ ₹5 ಲಕ್ಷ ಸೇರಿದಂತೆ ಬಡ್ಡಿ ಸೇರಿ ಒಟ್ಟು ₹15 ಲಕ್ಷ 65 ಸಾವಿರ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದಕ್ಕಾಗಿ ಮನನೊಂದ ವಿಷ ಸೇವಿಸಿ ಅಸುನೀಗಿದ್ದಾರೆ. ಝಳಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.