ಇಂಡಿ : ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಹಾಗೂ ಬಸವನ ಬಾಗೇವಾಡಿ ಮತಕ್ಷೇತ್ರದ ಅಭ್ಯರ್ಥಿ ಶಿವಾನಂದ ಪಾಟೀಲ ವಿರುದ್ಧ ಜೆಡಿಎಸ್ ರಾಜ್ಯ ಸಂಘಟನಾಕಾರ್ಯದರ್ಶಿ ಅಯೂಬ್ ನಾಟೀಕಾರ ಕಿಡಿಕಾರಿದ ಅವರು, ಹಾಲುಮತ ಸಮಾಜ ಈ ಬಾರಿ ಇವರಿಬ್ಬರಿಗೂ ತಕ್ಕ ಪಾಠ ಕಲಿಸುತ್ತದೆ ಎಂದು ಹೇಳಿದರು. ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತಾನಾಡಿದ ಅವರು, ಕಾಂಗ್ರೆಸ್ ಪಕ್ಷದ ಇಬ್ಬರ ಅಭ್ಯರ್ಥಿಗಳ ವಿರುದ್ಧ ಹರಿಹಾಯ್ದರು.
ಇಂಡಿ ಮತಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿದ ಸಿಂದಗಿ ಹಾಗೂ ಬಸವನ ಬಾಗೇವಾಡಿಯ ಕಾಂಗ್ರೆಸ್ ಅಭ್ಯರ್ಥಿ ಗಳು ಬಿ.ಡಿ. ಪಾಟೀಲರನ್ನು ಸೋಲಿಸುವ ಬಗ್ಗೆ ಮಾತಾನಾಡಿದ್ದಾರೆ. ಅದಕ್ಕಾಗಿ ಅವರಕ್ಕಿಂತ ಮುಂಚೆ ನಾವೇ ಮನೆಗೆ ಕಳಿಸೋಣ ಅವರಿಗೆ ಅವರ ಮತಕ್ಷೇತ್ರದಲ್ಲಿ ಹಾಲುಮತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ನಮ್ಮ ಮತಕ್ಷೇತ್ರದಲ್ಲಿ ಹಣ ಬಲ, ಇನ್ನೊಂದು ಬಲ, ಮತ್ತೊಂದು ಬಲ ಯಾವುದು ಕೆಲಸ ಮಾಡುವುದಿಲ್ಲ. ಅದೇ ಏನೆ ಇದ್ರೂ ಸಾಮನ್ಯ ಜನರ ಸುಖ, ದುಃಖದಲ್ಲಿ ಪಾಲ್ಗೊಳ್ಳವ ಹೃದಯವಂತಿಕೆ ಇರುವ ಸಾಮನ್ಯ ವ್ಯಕ್ತಿ ಬೇಕು. ಇನ್ನೂ ಈ ಬಾರಿ ನಮ್ಮ ಪಕ್ಷಕ್ಕೆ ಹ್ಯಾಟ್ರಿಕ್ ಹೀರೊ ಮಾಜಿ ಶಾಸಕ ರವಿಕಾಂತ್ ಪಾಟೀಲ ಮತ್ತು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಶಿವಯೋಗೆಪ್ಪ, ದಲಿತ ಸಮಾಜದ ಮುಖಂಡ ಮುತ್ತಪ್ಪ ಪೊತೆ ಜೊತೆಗೆ ಬೇರೆಬೇರೆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರಿದ್ದು ಆನೆ ಬಲಬಂದಿದೆ. ಮತಕ್ಷೇತ್ರದ ಜನರು ಕೂಡಾ ಪ್ರತಿ ಹಳ್ಳಿಯಲ್ಲೂ ದೊಡ್ಡ ಪ್ರಮಾಣದ ಬೆಂಬಲ ನೀಡಿ ವಿಜಯಮಾಲೆ ನಿಮ್ಮ ಕೊರಳಿಗೆ ಹಾಕುತ್ತೆವೆ ಎಂದು ಹೂ ಮಾಲಾರ್ಪಣೆ ಮಾಡಿದ್ದಾರೆ. ಹಾಗಾಗಿ ಈ ಬಾರಿ ನೂರಕ್ಕೆ ನೂರರಷ್ಟು ಸತ್ಯೆ ಇಂಡಿ ಮತಕ್ಷೇತ್ರದಲ್ಲಿ ಖಡಾಖಂಡಿತವಾಗಿ ಬಿ.ಡಿ.ಪಾಟೀಲ ಗೆದ್ದೆ ಗೆಲ್ಲುತ್ತಾರೆ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಅಯೂಬ್ ನಾಟೀಕಾರ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರವಿಕಾಂತ್ ಪಾಟೀಲ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೆದಲಗಿ, ಡಾ. ರಮೇಶ ರಾಠೋಡ, ಶ್ರೀಶೈಲಗೌಡ ಬಿರಾದಾರ, ಸಿದ್ದು ಡಂಗಾ ಹಾಗೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಸುಮಾರು 5 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.