ರಾಯಚೂರು – ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿಯನ್ನು ಫೆ. ೨೦ ರಂದು ಸರ್ಕಾರದ ವತಿಯಿಂದ ಕೋವಿಡ್ ನಿಯಮಗಳ ಪಾಲನೆಯ ದೃಷ್ಟಿಯಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಕುಂಬಾರ ಸಮಾಜದ ಗೌರವ ಅಧ್ಯಕ್ಷರಾದ ವೈ. ಸುರೇಂದ್ರಬಾಬು ಯರಮರಸ್ ಅವರು ತಿಳಿಸಿದರು.
ಅವರಿಂದು ನಗರದ ಪತ್ರಿಕಾ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕವಿ ಸರ್ವಜ್ಞ ರವರು ತ್ರಿಪದಿಗಳ ಪದ್ಯವನ್ನು ರಚನೆ ಮಾಡುವುದರ ಮೂಲಕ ತ್ರಿಪದಿ ಕವಿ ಎಂದು ಕರೆಯಲ್ಪಟ್ಟಿದರೆ. ಇವರು ಒಬ್ಬ ಮೇಧಾವಿ ವಚನಕಾರರಾಗಿದ್ದಾರೆ.
ಸಮಾಜದಲ್ಲಿನ ಅಂಕುಡೊಂಕುಗಳನ್ನು ಮೂಢನಂಬಿಕೆಗಳನ್ನು ಹಳೆಯ ಸಂಪ್ರದಾಯಗಳನ್ನು ಮತ್ತು ಕಟ್ಟಾಚಾರ ಕುರಿತು ತನ್ನ ವಚನಗಳಲ್ಲಿ ಪ್ರಸ್ತುತಪಡಿಸಿರುತ್ತಾರೆ ೧೬ ನೇ ಶತಮಾನ ಇವರ ಕಾಲವಾಗಿದ್ದು ಧಾರವಾಡ ಜಿಲ್ಲೆಯ ಪ್ರಸ್ತುತ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅಭಲೂರು ಮಾಸೂರು ಎಂಬ ಗ್ರಾಮದಲ್ಲಿ ಮಾಳ ಮತ್ತು ಮಾಳಮ್ಮ ಎಂಬುವವರ ಮಗನಾಗಿ ಜನಿಸಿ ಸಮಾಜದ ಹಳೆಯ ಸಂಪ್ರದಾಯಗಳನ್ನು ಕುರಿತು ತೀಕ್ಷಣವಾಗಿ ಮಾತನಾಡುತ್ತಿದ್ದರು ಅವರ ವಚನಗಳು ಸರಳತೆಯ ಪ್ರತೀಕವಾಗಿದ್ದವು.
ಇವರ ಸರಳ ಸಜ್ಜನಿಕೆಯ ಮೇಧಾವಿಯ ಕವಿಯ ಜಯಂತಿಯನ್ನು ಸರಕಾರದಿಂದ ೮ ನೇ ವರ್ಷ ಆಚರಣೆ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಜಿಲ್ಲಾಡಳಿತ ಇವರ ಜಯಂತಿಯನ್ನು ಆಚರಿಸಲು ಪೂರ್ವ ಭಾವಿ ಸಭೆ ನಡೆಸಿದ್ದು ಫೆ ೨೦ ರಂದು ತ್ರಿಪದಿ ಕವಿ ಸರ್ವಜ್ಞ ಜಯಂತಿಯನ್ನು ಜಿಲ್ಲಾಡಳಿತದಿಂದ ರಂಗಮಂದಿರದಲ್ಲಿ ಕೋವಿಡ್ ಕಾರಣದಿಂದ ಸರಳವಾಗಿ ಆಚರಣೆ ಮಾಡಲು ನಿರ್ಧರಿಸಿರುತ್ತಾರೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಜನ ಪ್ರತಿನಿಧಿಗಳು ವಿವಿಧ ಇಲಾಖೆಯ ಸರಕಾರಿ ನೌಕರರು ನಮ್ಮ ಜಿಲ್ಲೆಯ ಕುಂಬಾರ ಸಮಾಜದ ಬಂಧುಗಳು ಭಾಗವಹಿಸುದರ ಮೂಲಕ ಜಯಂತಿಯನ್ನು ಯಶಸ್ವೀಗೊಳಿಸಲು ಕುಂಬಾರ ಸಮಾಜದಿಂದ ವಿನಂತಿಯಿಂದ ತಿಳಿಸಿದರು. ಈ ಸಂದರ್ಭದಲ್ಲಿ ಕೆ. ಶಿವರಾಜ್ ವಡ್ಲೊರು, ಭೀಮಪ್ಪ, ನರಸಿಂಹ ಉಪಸ್ಥಿತರಿದ್ದರು.