ಅಫಜಲಪುರ : ಮನುಷ್ಯನ ಜೀವನದಲ್ಲಿ ಕಣ್ಣು ಅತ್ಯಮೂಲ್ಯವಾಗಿದ್ದು ಕಣ್ಣು ಸುರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹಳ ಮುಖ್ಯವಾಗಿದೆ ಎಂದು ವೇದಮೂರ್ತಿ ಹಾಲಯ್ಯ ಹಿರೇಮಠ ಹೇಳಿದರು.
ನಂತರ ಅವರು ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಣ್ಣೂರ, ಅಟಲ್ ಬಿಹಾರಿ ವಾಜಪೇಯಿ ಅಂಗವಿಕಲ ಸಂಘ, ಲಯನ್ಸ್ ಕ್ಲಬ್ ಆಫ್ ಸೋಲಾಪುರ ಸಂಚಲಿತ್ ಲಯನ್ಸ್ ಮತುರಾಬಾಯಿ ಫತೆಚಂದ ದಮಾಣಿ ಬ್ರೀಜ್ ಮೋಹನ್ ಪೋಪಲಿಯಾ ನೇತ್ರಾಲಯ, ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಸೋಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ. ಇದನ್ನು ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಕಣ್ಣಿನ ದೋಷ ಹಾಗೂ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಕಣ್ಣಿನ ಹಾರೈಕೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಬಡ ಜನರಿಗೆ ಉಚಿತ ನೇತ್ರ ತಪಾಸಣಾ ಶಿಬಿರಗಳು ತುಂಬಾ ಅನುಕೂಲವಾಗಿವೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ ಧೂಳಪ್ಪ ಬಾಕೆ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆರತಿ ಬಸವರಾಜ ಜನ್ನಾ, ಉಪಾಧ್ಯಕ್ಷ ಬಿ,ರಾಜು, ಬೆನಕನಹಳ್ಳಿ, ಸದಸ್ಯರಾದ ಬಸವರಾಜ ವಾಯಿ, ದುಂಡಪ್ಪ ಅಲ್ಲಾಪೂರ, ಪಿ,ಎಲ್ ಡಿ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಕಟ್ಟಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರಭು ಫುಲಾರಿ, ಮಣ್ಣೂರ ವಲಯ ಅಧ್ಯಕ್ಷ ಚಂದ್ರಶೇಖರ ಹೊಸೂರಕರ, ಅಪ್ಪಾಸಾಬ ಹೊಸೂರಕರ, ಶರಣಪ್ಪ ಸುತಾರ, ಮಲಕಣ್ಣ ಹೊಸೂರಕರ, ನಿವೃತ್ತ ಶಿಕ್ಷಕ ವಿಶ್ವನಾಥ ಕರೂಟಿ ಭೀಮಾಶಂಕರ ಪೂಜಾರಿ ಮಹಿಬೂಬ ಗೌರ ಮಹಾಂತೇಶ ಜಕಾಪೂರ, ಶ್ರೀಕಾಂತ ನಿವರಗಿ ಶಾವರಸಿದ್ದ ಜಮಾದಾರ, ಸುಭಾಷ ಪ್ಯಾಟಿ, ಬಸವರಾಜ ಅಳ್ಳಗಿ ಮಾಳಪ್ಪ ಸೇಜೂಳೆ, ವಿಶಾಲ ವಾಯಿ, ಡಾ॥ ನಿಂಗಣ್ಣ ಹೊಸೂರಕರ, ಡಾ॥ಸಿಂಧೂರಿ ಸರ್ವೇಶ, ಡಾ॥ ರಾಜಶೇಖರ ಜೇವೂರ, ಸೇರಿದಂತೆ ಇತರರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.