ಎಕ್ಸಪ್ರೆಸ್ ರೈಲು ನಿಲುಗಡಗೆ ಮನವಿ
ಇಂಡಿ : ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದ
ರೈಲು ನಿಲ್ದಾಣದಲ್ಲಿ ನಿತ್ಯ ಗೋಲಗುಂಬಜ್ ಎಕ್ಸಪ್ರೆಸ್
ರೈಲು ನಿಲುಗಡೆ ಮಾಡಬೆಕು ಎಂದು ಒತ್ತಾಯಿಸಿ
ಹುಬ್ಬಳ್ಳಿಯಲ್ಲಿ ನೈಋತ್ಯ ರೇಲ್ವೆ ಮಹಾಪ್ರಬಂಧಕರಿಗೆ ಲಚ್ಯಾಣ ಗ್ರಾಮಸ್ಥರು ಬುಧವಾರದಂದು ಮನವಿ ಪತ್ರ ಸಲ್ಲಿಸಿದರು.
ಈ ಗ್ರಾಮವು ‘ಶಿಕ್ಷಣ ಕಾಶಿ’ ಎಂದೆ ಪ್ರಸಿದ್ಧವಾಗಿದ್ದು ಇಲ್ಲಿ
ಮಹಾಪುರುಷ ಸಿದ್ಧಲಿಂಗ ಮಹಾರಾಜರ ಪ್ರಸಿದ್ಧ
ಮಠವಿದೆ. ನಿತ್ಯ ಈ ಮಠಕ್ಕೆ ಪುಣೆಯಿಂದ ಹುಬ್ಬಳ್ಳಿ
ವರೆಗಿನ ನೂರಾರು ಭಕ್ತರು ದರ್ಶನ ಪಡೆಯಲು ಬರುತ್ತಾರೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಡಿ.ಎಡ್.ಕಾಲೇಜು, ಪದವಿಪೂರ್ವ ಕಾಲೇಜು, ಆಯ್.ಟಿ. ಆಯ್. ಕಾಲೇಜು ಹೀಗೆ ಹಲವಾರು ಶಿಕ್ಷಣ ಸಂಸ್ಥೆಗಳಿದ್ದು ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ನಿತ್ಯ ವ್ಯಾಸಂಗವನ್ನು ಪಡೆಯಲು ಬರುತ್ತಿದ್ದಾರೆ.
ಇದು ಸುಮಾರು ೧೫ ಸಾವಿರ ಜನಸಂಖ್ಯೆಯುಳ್ಳ
ದೊಡ್ಡ ಗ್ರಾಮವಾಗಿದ್ದು, ಪ್ರಮುಖ ವ್ಯಾಪಾರ
ಕೇಂದ್ರವೂ ಆಗಿದೆ. ಮೀಟರ್ ಗೇಜ್ ಇದ್ದ
ಸಂದರ್ಭದಲ್ಲಿ ಎಲ್ಲ ಎಕ್ಸ್ಪ್ರೆಸ್ ರೈಲುಗಳು ಲಚ್ಯಾಣ
ರೈಲು ನಿಲ್ದಾಣದಲ್ಲಿ ನಿಲುಗಡೆ ಯಾಗುತ್ತಿದ್ದವು.
ಆದರೆ ಗೇಜ್ ಪರಿವರ್ತನೆಯ ನಂತರ
ನಿಲುಗಡೆಯನ್ನು ರೇಲ್ವೆ ಇಲಾಖೆ ನಿಲ್ಲಿಸಿದೆ. ಕಾರಣ
ಗೋಲಗುಂಬಜ್ ಎಕ್ಸ್ಪ್ರೆಸ್ ಸೇರಿದಂತೆ ಇನ್ನೂ ಕೆಲವು
ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಹಾಗೂ ನಿಗದಿತ ಸಮಯಕ್ಕೆ ರೈಲುಗಳು ಓಡಿಸ್ಬೇಕು ಎಂದು ಮನವಿ ಪತ್ರದ ಮೂಲಕ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ರೇಲ್ವೆ ಅಭಿವೃದ್ಧಿ ಸಮಿತಿಯ
ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ನಂದಕುಮಾರ ಪಾಟೀಲ, ಪ್ರಾಚಾರ್ಯ ಎಸ್.ಎಂ. ಶೆಟ್ಟೆಣ್ಣವರ, ಪ್ರಾಚಾರ್ಯ ಪಿ.ಬಿ. ಉಪ್ಪಾರ ಸ್ಥಳಿಯ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.