ಮುದ್ದೇಬಿಹಾಳ:ತಾಲೂಕಿನ ಬಿದರಕುಂದಿ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಈಗ ಒಟ್ಟು 550 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಇವರಿಗೆ ಈಗ ಕನಿಷ್ಠ 600 ವಿದ್ಯಾರ್ಥಿಗಳು ಕುಳೀತು ಊಟ ಮಾಡಲು ಊಟದ ಮನೆ ಮತ್ತು ಅಡುಗೆ ಮನೆ ನಿರ್ಮಿಸಿಕೊಡುವುದು ಸೇರಿದಂತೆ ಆಧುನಿಕ ಸೌಲಭ್ಯಗಳುಳ್ಳ ಆಟದ ಮೈದಾನ, ಹೈಟೆಕ್ ಶೌಚಾಲಯ, ಕುಡಿಯುವ ನೀರಿಗಾಗಿ ಕೃಷ್ಣಾ ನದಿ ನೀರನ ಸಂಪರ್ಕ ಕಲ್ಪಿಸುವುದು ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳ ಅವಶ್ಯಕತೆಯನ್ನು ಕುರಿತು ನೂತನ ಎಸ್ಡಿಎಂಸಿ ಅಧ್ಯಕ್ಷೆ ಪೂರ್ಣಿಮಾ ಬೆಳಗಲ್ಲ , ಸದಸ್ಯರಾದ ಬಂದೇನಮಾಜ ಕುಮಸಿ,ಮನೋಹರ್ ಪಾಟೀಲ, ಯಲ್ಲಪ್ಪ ಮ್ಯಾಗೇರಿ, ನಿಂಗನಗೌಡ ಬಿರಾದಾರ, (ಅಪ್ಪು) ಗೀತಾ ನಾಲತವಾಡ, ಮಂಜುಳಾ ಹಡಗಲಿ, ನೇತೃತ್ವದಲ್ಲಿ ಎಸ್.ಡಿ.ಎಂ.ಸಿ.ಯ ಎಲ್ಲಾ ಸದಸ್ಯರು ಸ್ಥಳೀಯ ಶಾಸಕರಾದ ಸಿ.ಎಸ್.ನಾಡಗೌಡರಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ರಾಜ್ಯಮಟ್ಟದ ಕನ್ನಡ ದಿನಪತ್ರಿಕೆಗಳಲ್ಲಿ ವಿಸ್ತ್ರತ ವರದಿ ಬಂದಿದ್ದನ್ನು ಗಮನಿಸಿದ ಮುದ್ದೇಬಿಹಾಳ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ಮತ್ತು ಸಹಾಯಕ ನಿದೇರ್ಶಕರಾದ ಖುಬಾಸಿಂಗ್ ಜಾಧವರವರು ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ಬಿದರಕುಂದಿ ಗ್ರಾಮ ಪಂಚಾಯತಿ ಪಿಡಿಓ ಪ್ರಭು ಜೇವೂರ,ಕಾರ್ಯದರ್ಶಿ ಪರಶುರಾಮ ಚಲವಾದಿ, ಇವರನ್ನು ಕರೆಸಿ ಶಾಲೆಗೆ ಬೇಕಾದ ಎಲ್ಲಾ ಮೂಲಭೂತ ಅವಶ್ಯಕತೆಗಳ ಜೊತೆಗೆ ಶಾಲಾ ಕಂಪೌಂಡನ್ನೂ ಸೇರಿಸಿ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ ಎನ್.ಆರ್.ಇ.ಜಿ. ಯೋಜನೆಯ ಅನುದಾನಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಯೋಜನಾ ವರದಿಯನ್ನು ತಯಾರಿಸಿ ಅನುಮೋದನೆಗಾಗಿ ಕಳಿಸಿಕೊಡುವಂತೆ ಮೌಖಿಕ ಆದೇಶವನ್ನು ನೀಡಿದರು.
ನಂತರ ಶಲಾ ಸಂಸತ್ತಿನ ಚುನಾವಣೆಯಲ್ಲಿ ಆಯ್ಕೆಯಧ ಮಕ್ಕಳೀಗೆ ಅಭಿನಂದಿಸಿದರು. ಶಿಕ್ಷಕರ ಸಭೆ ಕರೆದು ಶಾಲಾ ಕಟ್ಟಡದ ಕುರಿತು ಗಮನಹರಿಸಿದಂತೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಳ ಕಡೆಗೂ ಅತೀ ಹೆಚ್ಚಿನ ಗಮನ ಕೊಡಬೇಕು ಮತ್ತು ಈ ವರ್ಷದ ಕ್ರೀಡಾಕೂಟಗಳಲ್ಲಿ ಆದರ್ಶ ವಿದ್ಯಾಲಯದ ಮಕ್ಕಳೇ ಹೆಚ್ಚಿನ ಪ್ರಶಸ್ತಿಗಳನ್ನು ಬಾಚಿಕೊಂಡಟು ಬರುವಂತೆ ತರಬೇತಿ ನೀಡಬೇಕೆಂದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಗನಗೌಡ ಪಾಟೀಲ ಮುಖ್ಯ ಗುರುಗಳಾದ ಅನೀಲಕುಮಾರ ನಾಯಕ, ಅಸ್ಲಂ ಕೆರೂರ, ಎನ್.ಎಸ್.ಬಿರಾದಾರ, ಮುಂತಾದವರು ಇದ್ದರು.