ರಾಷ್ಟ್ರಧ್ವಜದ ನಿಯಮಗಳನ್ನು ಪ್ರತಿಯೊಬ್ಬರು ತಿಳಿದಿರಬೇಕು
ಇಂಡಿ – ಭಾರತೀಯ ರಾಷ್ಟ್ರಧ್ವಜವು ಇಡೀ ದೇಶದ ನಾಗರಿಕರ ಗೌರವ, ಹೆಮ್ಮೆ, ಸಂಸ್ಕೃತಿ,ನಾಗರಿಕತೆ ಮತ್ತು ಸಂಸ್ಕಾರದ ಪ್ರತಿಬಿಂಬಿತವಾಗಿದೆ. ಪ್ರತಿಯೊಬ್ಬ ನಾಗರಿಕರೂ ರಾಷ್ಟ್ರಧ್ವಜಕ್ಕೆ ರಾಷ್ಟ್ರಧ್ವಜ ನೀತಿಸಂಹಿತೆ ಪ್ರಕಾರ ಭಕ್ತಿ, ಶ್ರದ್ದೆ, ಶಿಸ್ತಿನಿಂದ ಗೌರವವನ್ನು ಸಲ್ಲಿಸಬೇಕಾಗುತ್ತದೆ ಎಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಗೋಮೂತ್ರ ಹೇಳಿದರು.
ತಾಲೂಕಿನ ತಾಂಬಾ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಪ್ರೌಢಶಾಲೆ, ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ,ಶಾಲಾ ಶಿಕ್ಷಣ ಇಲಾಖೆ ಇವರುಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ಮಾಹಿತಿ ಕಾಯಾ೯ಗಾರವನ್ನು ಉದ್ಘಾಟಿಸಿ ಮಾತನಾಡಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿರುವುದುರಿಂದ ರಾಷ್ಟ್ರಧ್ವಜವು ಭಾವೈಕ್ಯತೆಯ ಸಂಕೇತವಾಗಿದೆ ವಿದ್ಯಾರ್ಥಿಗಳಿಗೆ, ಶಿಕ್ಷಕ ವೃಂದದವರಿಗೆ ರಾಷ್ಟ್ರೀಯ ಭಾವೈಕ್ಯತೆ , ಹಾಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಬೌದ್ದಿಕವಾಗಿ, ಹಾಗೂ ಪ್ರಾತ್ಯಕ್ಷಿಕವಾಗಿ ತರಬೇತಿ ನೀಡಿದರು. ರಾಷ್ಟ್ರಧ್ವಜವನ್ನು ಮಡಚುವ, ಕಟ್ಟುವ ಹಾರಿಸುವ ವಿಧಾನವನ್ನು ಹಾಗೂ ಧ್ವಜದ ನಿಯಮಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾ ಪಿ,ಕೆ, ಬಿರಾದಾರ ಅವರು ಮಾತನಾಡಿ ರಾಷ್ಟ್ರಧ್ವಜದ ಬಗ್ಗೆ ನಮ್ಮಲ್ಲಿ ಗೌರವ,ಕಾಳಜಿ, ಶಿಸ್ತು, ಪ್ರೀತಿ – ಪ್ರೇಮ ಬೆಳೆಸಿಕೊಳ್ಳಬೇಕು ಹಾಗೂ ನಮ್ಮಲ್ಲಿ ರಾಷ್ಟ್ರಾಭಿಮಾನದ ಕೊರತೆ ಆಗದಂತೆ ದೇಶವನ್ನು ಬೆಳೆಸಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಕಾಯಾ೯ಗಾರದಲ್ಲಿ ಪ್ರಭಾರಿ ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕ ಹೆಚ್, ಕೆ,ಮಾಳಗೊಂಡ, ಶಾಲಾ ಎಸ್,ಡಿ,ಎಮ್,ಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ, ಶಾಲೆಯ ಎಲ್ಲಾ ಶಿಕ್ಷಕ ವೃಂದ, ಮಕ್ಕಳು ಉಪಸ್ಥಿತರಿದ್ದರು. ಕಾಯ೯ಕ್ರಮದ ನಿರೂಪಣೆ ಹಾಗೂ ಸ್ವಾಗತವನ್ನು ಎಸ್,ಆರ್ ಕುಂಬಾರ, ಹಾಗೂ ವಂದನಾರ್ಪಣೆಯನ್ನು ಎಸ್. ಡಿ. ಅಂಬಾರಿ ಅವರು ನೇರವೇರಿಸಿದರು.
ತಾಂಬಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ರಾಷ್ಟ್ರಧ್ವಜಾರೋನ ಬಗ್ಗೆ ತಿಳುವಳಿಕೆ ಹೇಳುತ್ತಿರುವುದು.