ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ
ಪ್ರತಿಯೊಬ್ಬ ಪ್ರಜೆ ಪತ್ರಕರ್ತನಾಗಬೇಕು-ನಡಹಳ್ಳಿ
ವರದಿ : ಬಸವರಾಜ ಕುಂಬಾರ ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪತ್ರಿಕಾರಂಗದ ವ್ಯಾಪ್ತಿ ವಿಸ್ತಾರವಾಗುತ್ತಿರುವ ಈ ದಿನಗಳಲ್ಲಿ ಪ್ರತಿಯೊಬ್ಬ ಪ್ರಜೆ ಪತ್ರಕರ್ತನ ಮನೋಭಾವ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದ ಪ್ರಭಾವದಿಂದ ಈಗಾಗಲೇ ಪತ್ರಕರ್ತರಾಗುವತ್ತ ಮುನ್ನುಗ್ಗುತ್ತಿರುವ ಯುವಜನತೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಅರಿಹಂತಗಿರಿಯಲ್ಲಿರುವ ಅರಿಹಂತ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲುಜೆ)ದ ಮುದ್ದೇಬಿಹಾಳ ತಾಲೂಕು ಘಟಕದಿಂದ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಮಾಧ್ಯಮ ಬರವಣ ಗೆಯ ಆಧಾರದಲ್ಲಿ ನಿಂತಿಲ್ಲ. ನಿಜವಾದ ಪತ್ರಕರ್ತ ಹೊರಹೊಮ್ಮುವುದು ಆತನ ಬರವಣ ಗೆಯಿಂದ.
ಪ್ರಿಂಟ್, ಡಿಜಿಟಲ್, ವಿಜುವಲ್, ಸೋಶಿಯಲ್ ಮೀಡಿಯಾಗಳ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದೆ. ಇದು ಈಗಿನ ಅದ್ಭುತ. ಪತ್ರಕರ್ತರಿಗೆ ಸಂವಹನ ಸಾಮರ್ಥ್ಯ, ಭಾಷಾ ಪ್ರೌಢಿಮೆ ಚನ್ನಾಗಿರಬೇಕು. ಇವೆರಡೂ ಇರುವವನೇ ನಿಜವಾದ ಶ್ರೀಮಂತ ಎಂದರು.
ಈ ದಿನಗಳಲ್ಲಿ ತಂತ್ರಜ್ಞಾನ ಸದುಪಯೋಗ, ದುರುಪಯೋಗ ಎರಡೂ ಆಗುತ್ತಿದೆ. ನಾನು, ನನ್ನ ಕುಟುಂಬ, ನನ್ನ ದೇಶ ಎನ್ನುವುದರ ಜೊತೆಗೆ ದೇಶದ ಹೆಮ್ಮೆಯ ಪ್ರಜೆಯಾಗುವತ್ತ ಯುವಜನತೆ ಗಮನ ಕೇಂದ್ರೀಕರಿಸಬೇಕು. ಮಾಧ್ಯಮದವರು ಇತಿಹಾಸ ಅರಿತುಕೊಳ್ಳಬೇಕು. ದಕ್ಷಿಣ ಭಾರತದಲ್ಲಿಯೇ ಉತ್ತರ ಕರ್ನಾಟಕ ಅತ್ಯಂತ ಸಂಪದ್ಬರಿತ ಪ್ರದೇಶವಾಗಿದೆ. ಇದರ ಮೇಲೆ ಬೆಳಕು ಚಲ್ಲುವ ಕಾರ್ಯ ಪತ್ರಕರ್ತರಿಂದಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ನ್ಯೂಸಗೆ ಹೆಚ್ಚು ಪ್ರಚಾರ ಸಿಗುತ್ತಿದೆ. ತಂತ್ರಜ್ಞಾನ ಬೆಳೆದಂತೆ ಸುಳ್ಳು ಸುದ್ದಿ ಹೆಚ್ಚಾಗುತ್ತಿದೆ. ಅದನ್ನು ಪರಾಮರ್ಶೆ ಮಾಡಿದ ನಂತರವೇ ನಂಬಬೇಕು. ಮೋಬೈಲೇ ಡಿಜಿಟಲ್ ಲೈಬ್ರರಿ ಇದ್ದ ಹಾಗೆ. ಯುವಜನತೆ ಅತ್ಮವಿಸ್ವಾಸ ಹೆಚ್ಚಿಸಿಕೊಂಡು ಗಟ್ಟಿಯಾಗಬೇಕು. ಎಲ್ಲವನ್ಬೂ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಓಟ್ ಹಾಕುವವರು ಜಾಣರಾಗಬೇಕು ಎಂದರು.
ಪತ್ರಿಕೋದ್ಯಮ-ಪತ್ರಕರ್ತರ ಕಾರ್ಯಶೈಲಿ ಕುರಿತು ವಿಶೇಷ ಉಪನ್ಯಾಸ ನೀಡಿದ ಅರಿಹಂತ ಪದವಿ ಕಾಲೇಜು ಉಪನ್ಯಾಸಕ ಪ್ರೊ|ರಾಜನಾರಾಯಣ ನಲವಡೆ ಅವರು ಮಾತನಾಡಿ ಪತ್ರಕರ್ತರು ನಿಸ್ವಾರ್ಥ ಸೇವೆ ಒದಗಿಸಬೇಕು. ಆರ್ಥಿಕ ಬಲ ಇರದಿದ್ದರೂ ಪರವಾಗಿಲ್ಲ ಆದರೆ ನೈತಿಕ, ಮಾನಸಿಕ ಬಲ ಹೊಂದಿರಬೇಕು. ತಪುö್ಪ ಮಾಡದವರು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಸಮಾಜದ ಅಂಕುಡೊAಕು ತಿದ್ದುವ ಪತ್ರಕರ್ತರನ್ನು ಎಲ್ಲರೂ ಗೌರವಿಸಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸರಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಪತ್ರಿಕಾರಂಗವೇ ಕಾರಣ. ಪತ್ರಿಕಾರಂಗ ಪ್ರಜಾಪ್ರಭುತ್ವ ಬಲಿಷ್ಠಗೊಳಿಸಿದೆ. ಪತ್ರಕರ್ತರು ಇಡೀ ಸಮಾಜಕ್ಕೆ ಶಿಕ್ಷಕರು, ವೈದ್ಯರು ಇದ್ದ ಹಾಗೆ. ಪತ್ರಕರ್ತರು ಸತ್ಯದ ಪರವಾಗಿರಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಅರಿಹಂತ ಸಂಸ್ಥೆಯ ಅಧ್ಯಕ್ಷ ಮಹಾವೀರ ಸಗರಿ ಅವರು ಮಾತನಾಡಿ ನಾನೂ ಸಹಿತ ೨೫ ವರ್ಷಗಳವರೆಗೆ ಪತ್ರಕರ್ತನಾಗಿ ಕೆಲಸ ಮಾಡಿದ್ದು ಅವರ ಆಗುಹೋಗುಗಳ ಅನುಭವ ನನಗಿದೆ. ಪತ್ರಿಕಾರಂಗದಲ್ಲಿನ ನ್ಯೂನ್ಯತೆ ಸರಿಯಾಗಬೇಕು. ನಡಹಳ್ಳಿಯವರು ಈ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿರುವುದರಿಂದ ಅವರನ್ನು ಮಾಜಿ ಶಾಸಕರು ಎನ್ನಲು ಆಗುವುದಿಲ್ಲ. ಅವರು ಯಾವತ್ತಿದ್ದರೂ ನಮಗೆ ಶಾಸಕರೇ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಕಾನಿಪ ಸಂಘದ ರಾಜ್ಯ ಕಾರ್ಯಕಾರಿಣ ಸಮಿತಿ ಸದಸ್ಯ ಡಿ.ಬಿ.ವಡವಡಗಿ ಅವರು ಮಾತನಾಡಿ ಯಾರಿಗೂ ಕೈಚಾಚದೆ ಸಂಘದ ಸದಸ್ಯರು ಒಗ್ಗಟ್ಟಿನಿಂದ ಸ್ವಯಂಪ್ರೇರಿತರಾಗಿ ಜವಾಬ್ಧಾರಿಗಳನ್ನು ಹೊತ್ತುಕೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಿರುವುದು ಪತ್ರಕರ್ತರಿಗೆ ಮಾದರಿ ಕಾರ್ಯವಾಗಿದೆ. ನಮ್ಮ ಸಂಘವು ಸರ್ಕಾರದ ಮೇಲೆ ಪ್ರಭಾವ ಬೀರುವಷ್ಟು ಬಲಿಷ್ಠವಾಗಿದ್ದು ನಮ್ಮ ಸಂಘದ ಹೊರಾಟದ ಫಲವಾಗಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೇರಿ ಹಲವು ಸೌಲಭ್ಯ ದೊರಕಿವೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬೆಣ್ಣೂರ, ಕಾಲೇಜಿನ ಪ್ರಾಂಶುಪಾಲ ಪ್ರೊ|ವಿಫುಲ್ ಸಗರಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್ ವೇದಿಕೆಯಲ್ಲಿದ್ದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಆರ್.ಬಿ.ವಡವಡಗಿ(ಮುತ್ತು) ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಪತ್ರಕರ್ತರಾದ ರಿಯಾಜಅಹ್ಮದ್ ಮುಲ್ಲಾ, ಹಣಮಂತ ಬೀರಗೊಂಡ(ಢವಳಗಿ), ಈಶ್ವರ ಈಳಗೇರ (ರೂಢಗಿ), ಹಣಮಂತ ಟಕ್ಕಳಕಿ(ಮುತ್ತು), ಕೃಷ್ಣಾ ಕುಂಬಾರ ಇವರಿಗೆ ತಾಲೂಕು ಮಟ್ಟದ ಉತ್ತಮ ಪತ್ರಕರ್ತ ವಾರ್ಷಿಕ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಬಸವರಾಜ ಕುಂಬಾರ ಅವರ ಪುತ್ರಿ ಭಾಗ್ಯಶ್ರೀಯನ್ನು ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದಿದ್ದಕ್ಕಾಗಿ ಪತ್ರಕರ್ತರ ಮಕ್ಕಳಿಗೆ ನೀಡುವ ಗೌರವದೊಂದಿಗೆ ಸನ್ಮಾನಿಸಲಾಯಿತು. ಜಿಲ್ಲಾ ಸಂಘಕ್ಕೆ ನೂತನ ಅಧ್ಯಕ್ಷರಾದ ಹಿನ್ನೆಲೆ ಪ್ರಕಾಶ ಬೆಣ್ಣೂರ ಅವರನ್ನು ಸನ್ಮಾನಿಸಲಾಯಿತು.
ಪವಿತ್ರಾ ಕಲಬುರ್ಗಿ ಪ್ರಾರ್ಥಿಸಿದರು. ಮುತ್ತು ವಡವಡಗಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ನೂರೇನಬಿ ನದಾಫ ನಿರೂಪಿಸಿ ವಂದಿಸಿದರು. ಸಂಘದ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನನ್ನ ಶಾಸಕತ್ವದ ಅವಧಿಯಲ್ಲಿ ಅಭಿವೃದ್ಧಿಗಾಗಿ ಪ್ರಾಮಾಣ ಕ ಕೆಲಸ ಮಾಡಿರುವ ತೃಪ್ತಿ ನನಗಿದೆ. ಕಳೆದ ಚುನಾವಣೆಯಲ್ಲಿ ಮತದಾರರು ಮುಗ್ಧರಾಗಿ ಮತ ಚಲಾಯಿಸಿದರೋ, ದಡ್ಡರಾಗಿ ಮತ ಚಲಾಯಿಸಿದರೋ ಗೊತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಸಂಪದ್ಭರಿತ ಮತಕ್ಷೆತ್ರದ ಅಭಿವೃದ್ದಿಯ ನಿಜವಾದ ಚಿಂತಕರನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡುವ ಜಾಣತನ ತೋರಿಸಬೇಕು. -ಎ.ಎಸ್.ಪಾಟೀಲ ನಡಹಳ್ಳಿ, ರಾಜ್ಯಾಧ್ಯಕ್ಷರು, ಬಿಜೆಪಿ ರೈತ ಮೋರ್ಚಾ, ಕರ್ನಾಟಕ.