ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ, ಇಂಡಿ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ
ಇಂಡಿ: ಎಸ್ಸೆಸ್ಸೆಲ್ಸಿ ಎರಡನೆಯ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಇಂಡಿ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಎಸ್ಸೆಸ್ಸೆಲ್ಷಿ ನೋಡಲ್ ಅಧಿಕಾರ ಎ.ಓ.ಹೂಗಾರ ತಿಳಿಸಿದ್ದಾರೆ.
ಇಂಡಿ ತಾಲೂಕಿನಿಂದ ೧೨೫೬ಬಾಲಕರು, ೭೮೦ ಬಾಲಕಿಯರು ಒಟ್ಟು ೨೦೩೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೫೭೧ ಬಾಲಕರು ೩೮೫ ಬಾಲಕಿಯರು ಒಟ್ಟು ೯೫೬ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ ೪೬ ರಷ್ಟು ಬಾಲಕರು, ಶೇ ೫೦ ರಷ್ಟು ಬಾಲಕಿಯರು ಒಟ್ಟು ಶೇ ೪೬.೯೫ ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಮತ್ತು ಇಂಡಿ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ದಲ್ಲಿದೆ ಎಂದು ಎಸ್ಸೆಸ್ಸೆಲ್ಷಿ ನೋಡಲ್ ಅಧಿಕಾರ ಎ.ಓ.ಹೂಗಾರ ತಿಳಿಸಿದ್ದಾರೆ.