ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ಉಪನ್ಯಾಸಕ ಸದಾನಂದ
ಇಂಡಿ : ನಿಸರ್ಗದಲ್ಲಿ ಒಳ್ಳೆಯ ಹವಾಮಾನ ಮಳೆ ಬರಬೇಕಾದರೆ ಗಿಡಮರಗಳು ಬೆಳೆಸುವುದು ಅತಿ ಅವಶ್ಯಕ ಆದ್ದರಿಂದ ನಾವೆಲ್ಲರೂ ನಮ್ಮ ಮನೆ ಹೊಲದ ಬದಿಗಳಲ್ಲಿ ಗಿಡಮರಗಳನ್ನು ನೆಟ್ಟು ಪರಿಸರವನ್ನು ರಕ್ಷಿಸೋಣ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಆದ್ದರಿಂದ ಇಂದು ವಿಶ್ವದಾದ್ಯಂತ ಪರಿಸರ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಉಪನ್ಯಾಸಕ ಸದಾನಂದ ಈರನಕೇರಿ ಹೇಳಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀಮತಿ ಶಾಲಿನಿ ಮಾಣಿಕ್ ಚಂದ್ ದೋಷಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ವಿದ್ಯಾರ್ಥಿನಿಗಳೆಲ್ಲರೂ ಪರಿಸರ ವನ್ನು ರಕ್ಷಣೆಯನ್ನು ಮಾಡುವುದು ನಮ್ಮ ಕರ್ತವ್ಯ ಮುಂದಿನ ಜನಾಂಗಕ್ಕೆ ಇಂದೇ ನಾವು ಗಿಡಮರಗಳನ್ನು ಹಚ್ಚಿ ಒಳ್ಳೆಯ ವಾತಾವರಣವನ್ನು ಸೃಷ್ಟಿ ಮಾಡೋಣ, ಸಸಿಗಳನ್ನು ಹಚ್ಚುವುದರ ಮೂಲಕ ಕಾಲೇಜಿನಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ವಿದ್ಯಾರ್ಥಿನಿಯರು ಕಾಲೇಜ್ ಕ್ಯಾಂಪಸ್ ನಲ್ಲಿ ಗಿಡಗಳನ್ನು ಹಚ್ಚಿದರು.
ಕಾಲೇಜಿನ ಪ್ರಾಚಾರ್ಯರಾದ ಎ ಬಿ ಪಾಟೀಲ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.