ಮುದ್ದೇಬಿಹಾಳ ತಾಲೂಕಿನ ತಂಗಡಗಿ ವಲಯ ನೆಬಗೇರಿ ಗ್ರಾಮದ ಕಾರ್ಯಕ್ಷೇತ್ರದಲ್ಲಿ ಸುಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಿಡ ನಾಟಿ ಮಾಡುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಹಾಗೂ ಎಲ್ಲಾ ಸದಸ್ಯರಿಗೆ ಪರಿಸರ ಜಾಗೃತಿ ಕುರಿತು ಮಾಹಿತಿ ನೀಡಲಾಯಿತು ಸದರಿ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಪ್ರಭು ನಾಯಕ ಊರಿನ ಗಣ್ಯರಾದ ಶರಣಬಸಯ್ಯ ಒಕ್ಕೂಟದ ಅಧ್ಯಕ್ಷ ಕಾಳಮ್ಮ ಬಡಿಗೇರ, ಶಾಲೆಯ ಶಿಕ್ಷಕರಾದ ಶರಣಗೌಡ ಕೃಷಿ, ಮೇಲ್ವಿಚಾರಕ ದೇವೇಂದ್ರಪ್ಪ ಜೆ ಕೆ, ಹಾಗೂ ವಲಯದ ಮೇಲ್ವಿಚಾರಕಿ ಶಂಕ್ರುಬಾಯಿ, ಸೇವಾಪ್ರತಿನಿದಿ ತನುಜಾ ಮತ್ತು ನಿಂಗಮ್ಮ ಸಂಘದ ಸದಸ್ಯರು ಶಾಲೆ ಮಕ್ಕಳು ಸೇರಿದಂತೆ ಉಪಸ್ಥಿತರಿದ್ದರು.