ಜಾತಿ ಸಮೀಕ್ಷೆ ಗಣತಿದಾರರು ಬಂದಾಗ ಜಾತಿ ಕಾಲದಲ್ಲಿ ವಡ್ಡರ ಎಂದು ನಮೂದಿಸಿ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ರಾಜ್ಯದಲ್ಲಿ ರಾಜ್ಯ ಸರ್ಕಾರ ನಡೆಸಲಿರುವ ಜಾತಿ ಜನ ಗಣತಿಯಲ್ಲಿ ಭೋವಿ ವಡ್ಡರ ಸಮಾಜದವರು ಈ ಕೂಡಲೇ ತಮ್ಮ ಮನೆಗೆ ಗಣತಿದಾರರು ಬಂದಾಗ ಜಾತಿ ಕಾಲಂದಲ್ಲಿ ವಡ್ಡರ ಎಂದು ನಮೂದಿಸಿ ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ತಾಲೂಕಾ ಉಪಾಧ್ಯಕ್ಷ ಹಣಮಂತ ಭೈರವಾಡಗಿ ಅವರು ವಡ್ಡರ ಸಮಾಜದವರಲ್ಲಿ ಮನವಿ ಮಾಡಿಕೊಂಡರು. ತಾಲ್ಲೂಕಿನ ಇಣಚಗಲ್ಲ ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಜನ ಜಾಗ್ರತಿ ಸಭೆಯಲ್ಲಿ ಮಾತನಾಡಿ, ಈ ಸಮೀಕ್ಷೆ ನಂತರ ಸಿಗುವ ಅಂಕಿ ಆಧರಿಸಿ ಮಿಸಲೂ ಪ್ರಮಾಣ ಪತ್ರ ಸಿಗುತ್ತದೆ ಎಂದು ಹೇಳಿ ಎಂದು ಹೇಳಿದರು.
ಈ ವೇಳೆ ತಾಲೂಕಾ ಕಾರ್ಯದರ್ಶಿ ನಾಗರಾಜ ಭೈರವಾಡಗಿ, ಸದಸ್ಯರಾದ ಹಣಮಂತ ವಡ್ಡರ, ರಾಜು ಭೈರವಾಡಗಿ, ಕೃಷ್ಣಾ ಸೋಮನಾಳ, ಆನಂದ ದೊಡಮನಿ, ಪ್ರಶಾಂತ ಭೈರವಾಡಗಿ, ಮುತ್ತು ಕವಡಿಮಟ್ಟಿ, ತಿಪ್ಪಣ್ಣ ಗೌಂಡಿ, ಶ್ರೀಕಾಂತ ಹಂಚಲಿ,ಸೇರಿದಂತೆ ಭಾಗವಹಿಸಿದ್ದರು.