ಐಸಿಸಿ ವಿಶ್ವಕಪ್ ೨೦೨೩: ಹಾಲಿ ಚಾಂಪಿಯನ್ ಇಂಗ್ಲೆಂಡ್ ಟಕ್ಕರ್ ಕೊಡಲು ಡಚ್ಚರ ಪಡೆ..? ಇಂದು
Voice Of Janata Desk News :
England vs Netherlands Cricket World Cup 2023: ಕ್ರಿಕೆಟ್ ವಿಶ್ವಕಪ್‌ನಲ್ಲಿ ಬುಧವಾರ ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್ ತಂಡಗಳು ಪೈಪೋಟಿ ನಡೆಸುತ್ತಿವೆ.
ಏಕದಿನ ವಿಶ್ವಕಪ್ 2023ರಲ್ಲಿ ನವೆಂಬರ್ 8ರ ಬುಧವಾರ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಸೆಮಿಫೈನಲ್ ಪ್ರವೇಶಕ್ಕಾಗಿ ನೆದರ್ಲೆಂಡ್ಸ್ ತಂಡವು ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅತ್ತ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ಇಂಗ್ಲೆಂಡ್, ಔಪಚಾರಿಕ ಪಂದ್ಯದಲ್ಲಿ ಕನಿಷ್ಠ ಗೆಲುವಿನ ರುಚಿ ಕಾಣುವ ನಿರೀಕ್ಷೆಯಲ್ಲಿದೆ.
ಅಫ್ಘಾನಿಸ್ತಾನ 11ರ ಬಳಗ:
ರಹಮಾನುಲ್ಲಾ ಗುರ್ಬಾಜ್,ಇಬ್ರಾಹಿಂ ಝದ್ರಾನ್, ರಹಮತ್ ಷಾ, ನಾಯಕ ಹಸ್ಮತುಲ್ಲಾ ಶಾಹಿದಿ, ಅತುಲ್ಲಾ ಒಮರ್ಜಾಯ್, ವಿಕೆಟ್ ಕೀಪರ್ ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಲಕ್ ಫಾರೂಕಿ, ನೂರ್ ಅಹ್ಮದ್..
ನೆದರ್ಲೆಂಡ್ಸ್ 11ರ ಬಳಗ:
ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್,ಕಾಲಿನ್ ಅಕರ್ಮನ್, ಸೈಬ್ರಾಂಡ್ ಎಂಗಲ್ಪೆಕ್ಟ್, ವಿಕೆಟ್ ಕೀಪರ್ ಮತ್ತು ನಾಯಕ ಸ್ಕಾಟ್ ಎಡ್ವರ್ಡ್ಸ್, ಬಾಸ್ ಡಿ ಲೀಡೆ, ಸಾಕಿಬ್ ಜುಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್..