Voice Of Janata Newd Desk : ENG vs AUS :
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 36ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದ ವಿವರ್ ಇಲ್ಲಿದೆ.
ಅಹಮದಾಬಾದ್: ಇಂಗ್ಲೆಂಡ್ ತಂಡದ ಮೂವರು ಪ್ರಮುಖ ಬ್ಯಾಟರ್‌ಗಳ ವಿಕೆಟ್ ಕಬಳಿಸಿದ ಸ್ಪಿನ್ನರ್ ಆ್ಯಡಂ ಜಂಪಾ ಆಸ್ಟ್ರೇಲಿಯಾ ತಂಡಕ್ಕೆ ಜಯದ ಕಾಣಿಕೆ ನೀಡಿದರು. ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 33 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಸೆಮಿಫೈನಲ್ ಹೊಸ್ತಿಲಿಗೆ ಬಂದು ನಿಂತಿತು.
ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಾರ್ನಸ್ ಲಾಬುಷೇನ್ (71; 83ಎ) ಮತ್ತು ಸ್ಟೀವನ್ ಸ್ಮಿತ್ (44; 52) ಅವರ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡವು 49.3 ಓವರ್‌ಗಳಲ್ಲಿ 286 ರನ್ ಗಳಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು 48.1 ಓವರ್‌ಗಳಲ್ಲಿ 253 ರನ್ ಗಳಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾದ ಆ್ಯಡಂ ಜಂಪಾ (21ಕ್ಕೆ3) ಅವರೊಂದಿಗೆ ವೇಗಿಗಳೂ ಉತ್ತಮ ಬೌಲಿಂಗ್ ಮಾಡಿದರು. ತಂಡಕ್ಕೆ ಟೂರ್ನಿಯಲ್ಲಿ ಐದನೇ ಜಯ ಇದಾಗಿದೆ.
ಎರಡು ತಂಡದ ಸ್ಕೋರ್ ಕಾರ್ಡ
ಆಸ್ಪ್ರೇಲಿಯಾ: 49.3 ಓವರ್‌ಗಳಲ್ಲಿ286 (ಮಾರ್ನಸ್ ಲಾಬುಶೇನ್ 71, ಸ್ಟೀವನ್ ಸ್ಮಿತ್ 44, ಕ್ಯಾಮೆರಾನ್ ಗ್ರೀನ್ 47; ಕ್ರಿಸ್ ವೋಕ್ಸ್ 54ಕ್ಕೆ 4, ಮಾರ್ಕ್ ವುಡ್ 70ಕ್ಕೆ 2, ಆದಿಲ್ ರಶೀದ್ 38ಕ್ಕೆ 2)
ಇಂಗ್ಲೆಂಡ್: 48.1 ಓವರ್‌ಗಳಲ್ಲಿ253 (ಡಾವಿಡ್ ಮಲಾನ್ 50, ಬೆನ್ ಸ್ಟೋಕ್ಸ್ 64, ಮೊಯೀನ್ ಅಲಿ 42; ಆಡಂ ಝಾಂಪ 21ಕ್ಕೆ 3, ಜಾಶ್ ಹೇಝಲ್‌ವುಡ್ 49ಕ್ಕೆ 2, ಪ್ಯಾಟ್ ಕಮಿನ್ಸ್ 49ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಆಡಂ ಝಾಂಪ