ಕುಡಿಯುವ ನೀರಿನ ಪರಿಸ್ಥಿತಿ ಹಾಗೂ ಬರ ನಿರ್ವಹಣೆ
ತುರ್ತು ಸಭೆ
ಇಂಡಿ : ಬರ ಎದಿರಿಸಲು ತಾಲೂಕ ಮಟ್ಟದ ಅಧಿಕಾರಿಗಳ ಸನ್ನದ ರಾಗಬೇಕು ತಾಲೂಕಿನ ಯಾವುದೆ ಗ್ರಾಮದ ಜನ ವಸತಿ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯ ಯಾಗದಂತೆ ಮುಂಜಾಗ್ರತ ಕ್ರಮ ವಹಿಸಬೇಕು
ಎಂದು ಉಪ ವಿಭಾಗಧಿಕಾರಿ ಅಭಿದ್ ಗದ್ಯಾಳ
ಹೇಳಿದರು.
ಪಟ್ಟಣದ ತಾಲೂಕ ಆಡಳಿತ ಸೌಧ ಸಭಾಂಗಣದಲ್ಲಿ
ನಡೆದ ಟಾಸ್ಪೋರ್ಸ್ ಸಭೆಯ ಅಧ್ಯಕ್ಷ ವಹಿಸಿ
ಮಾತನಾಡಿದರು. ನೀರಿನ ಮೂಲ ಇದ್ದರೆ ಅದನ್ನು ತಮ್ಮ ವಶಕ್ಕೆ ಪಡೆದುಕೊಂಡು ಗ್ರಾಮಗಳಿಗೆ ಕುಡಿಯುವ
ನೀರು ಒದಗಿಸಬೇಕು. ನೀರಿನ ಮೂಲ ಇಲ್ಲದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಯಾವುದೆ ಗ್ರಾಮಕ್ಕೆ ಜನ ವಸತಿಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯ ಯಾಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕಾ ಮೇಲಾಧಿಕಾರಿಗಳು, ನೊಡಲ್ ಅಧಿಕಾರಿಗಳು ನೋಡಿ ಕೊಳ್ಳಬೇಕು ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಈ ವರ್ಷ ವಾಡಿಕೆಯಂತೆ ಮಳೆ
ಬರಬೇಕಾದ ಪ್ರಮಾಣ ಕಡಿಮೆ ಇದೆ. ಮಳೆಯು
ಬಾರದೆ ಇರುವ ಕಾರಣ ಭೀಕರ ಬರದ ಕ್ಷಾಮ ಇಂಡಿ
ತಾಲೂಕಿಗೆ ಆವರಿಸಿದೆ ಮುನ್ನೆಚ್ಚರಿಕೆ ಕ್ರಮವಾಗಿ
ಸರಕಾರ ಬಹು ಹಳ್ಳಿ ಕಡಿಯುವ ನೀರಿನ ಯೋಜನೆಯ ಅಡಿಯಲ್ಲಿ ತಾಲೂಕಿನಲ್ಲಿ ಇರುವ ಬಹುತೇಕ ಕೆರೆಗಳನ್ನು ಕಾಲುವೆಯ ಮೂಲಕ ನೀರು ಹಾಯಿಸಿ ತುಂಬಿಸಲಾಗಿದೆ. ಈ ಸದ್ಯದ ಸ್ಥಿತಿಯಲ್ಲಿ ಜನ ಮತ್ತು ಜಾನುವಾರುಗಳಿಗೆ ಯಾವುದೇ ತೊಂದರೆಗಳಿಲ್ಲ ಮುಂಬರವ ದಿನಗಳಲ್ಲಿ ಜನ
ಮತ್ತು ಜಾನುವಾರುಗಳಿಗೆ ಯಾವುದೇ ತೊಂದರೆ ಯಾಗಬಾರದೆಂದು ತಿಳಿಸಿದರು. ತಾಲೂಕಿನಾದ್ಯಂತ 147 ಕಾಯ್ದೆ ಜಾರಿಗೆ ಮಾಡಲಾಗಿದ್ದು ಕರೆಗಳ ಹತ್ತಿರ ವಿರುವ ತೆರೆದ ಬಾವಿ ಮತ್ತು ಕೊಳವೆ ಬಾವಿಗಳನ್ನು ರೈತರು
ಕೃಷಿ ಚಟುವಟಿಕೆ ಬಳಸುವಂತಿಲ್ಲ ಅಂತಹ ರೈತರ
ಗಮನಕ್ಕೆ ಬಾರದೇ ಇದ್ದರೆ ಕೂಡಲೇ ನಮ್ಮ
ಗಮನಕ್ಕೆ ತರಬೇಕೆಂದು ಎಲ್ಲ ಅಧಿಕಾರಿಗಳಿಗೆ
ಸೂಚಿಸಿದರು.
ತಾಲೂಕು ದಂಡಾಧಿಕಾರಿ ಬಿ ಎಸ್ ಕಡಕಬಾವಿ, ಇಒ ಬಾಬು ರಾಠೋಡ, ಗ್ರಾಮೀಣ ಕುಡಿಯುವ ನೀರು ಮತ್ತು
ನೈರ್ಮಲ್ಯ ಇಲಾಖೆಯ ಅಧಿಕಾರಿ ಎಸ್ ಆರ್ ರುದ್ರವಾಡಿ, ಎ ಇ ಇ ಚವ್ಹಾಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಮಹದೇವಪ್ಪ ಏವುರ್, ತೋಟಗಾರಿಕೆ ಇಲಾಖೆಯ
ಹಿರಿಯ ಅಧಿಕಾರಿ ಎಚ್ ಎಸ್ ಪಾಟೀಲ, ಹೆಸ್ಕಾಂ ಅಧಿಕಾರಿ ಎ ಇ ಇ ಎಸ್ ಆರ್ ಮೆಡೇಗಾರ, ಪುರಸಭೆ ಮುಖ್ಯಧಿಕಾರಿ ಮಹಾಂತೇಶ ಹಂಗರಗಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಟಾಸ್ಕ ಫೋರ್ಸ ಸಭೆಯಲ್ಲಿ ಎಸಿ ಅಬೀದ್ ಗದ್ಯಾಳ
ಮಾತನಾಡಿದರು.