ಆನೆ ದಾಳಿಗೆ ರೈತನ ಜೋಳದ ರಾಶಿ ಫಸಲು ನಾಶ: ರೈತರ ಆಕ್ರೋಶ
ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ ಪಚ್ಚೆದೊಡ್ಡಿ ಗ್ರಾಮದ ಸರ್ವೆನಂಬರ್ 537ರಲ್ಲಿ ಸಣ್ಣೆಗೌಡರಿಗೆ ಸೇರಿದ ಏಳು ಎಕ್ರೆ ಜಮಿನಿನಲ್ಲಿ ರಾಶಿಯಾಕಿದ್ದ ಜೋಳವನ್ನು ರಾತ್ರಿ ಸಮಯದಲ್ಲಿ ಆನೆ ದಾಳಿಯಿಂದ ಸರಿ ಸುಮಾರು ಇಪ್ಪತ್ತು ಕುಂಟಾಲ್ ಗು ಹೆಚ್ಚು ಜೋಳವನ್ನು ಮೆಯ್ದು ಹೋಗಿದ್ದು ಇದರಿಂದ ಸಣ್ಣೆಗೌಡ ಎಂಬುವವರಿಗೆ ಅಪಾರ ಹಾನಿಯಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಇದರಿಂದ ಹೆಚ್ಚು ನಷ್ಟವುಷ್ಟಂಟಾಗಿದ್ದು ಅಲ್ಲದೆ ಇಪ್ಪತ್ತು ಸಾವಿರ ರೂಗಳ ಬೆಲೆ ಬಾಳುವ ಟಾರ್ಪಲ್ ಗಳನ್ನು ಸಹ ಅರಿದಿದ್ದು ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ಅಧಿಕಾರಿಗಳು ಸ್ಥಳ ಮಹಜರು ಮಾಡಿ ಹೋಗಿದ್ದು ರೈತನಿಗೆ ಯಾವುದೆ ಪರಿಹಾರದ ಭರವಸೆಯನ್ನು ನೀಡದೆ ವಾಪಾಸು ತೆರಳಿದ್ದು ಸುತ್ತಮುತ್ತಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧವಾಗಿ ರೈತ ಮುಖಂಡ ಬಸವರಾಜು ಮಾತನಾಡಿ ಅರಣ್ಯ ಇಲಾಖೆಯ ದೋರಣೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು.ಈ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸರಿಯಾದ ಮಹಜರು ಮಾಡಿ ಸರಿಯಾದ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ತಿಳಿಸಿದರು. ಇದೇ ಸಮಯದಲ್ಲಿ ರೈತರ ಮುಖಂಡ ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನೆ ಕಾರ್ಯದರ್ಶಿ ಬಸವರಾಜು ,ಅರಣ್ಯ ಇಲಾಖೆಯ ಅಧಿಕಾರಿ ಅನಿಲ್ ಕುಮಾರ್ ,ಮುತ್ತುರಾಜು ,ಸುರೇಶ ,ಶ್ರೀಕಂಠಪ್ಪ ಅರಸು ,ನವೀನ್ ,ಗೋವಿಂದೆಗೌಡ ,ಇನ್ನಿತರರು ಹಾಜರಿದ್ದರು.