ಚಡಚಣ : ಕಾರು ಚಾಲಕನ ಗಮನ ಬೇರೆಡೆ ಸೆಳದು 18ಲಕ್ಷ ಕಳ್ಳತನ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ನಡೆದಿದೆ. ಕಾರಿನ ಬೋನಟ್ ಮೇಲೆ ಆಯಿಲ್ ಹಾಕಿ ಗಮನ ಬೇರೆಡೆ ಸೆಳೆದು ಅಡತಿ ವ್ಯಾಪಾರಿ ಸಿದ್ದಾರಾಮ ಕಾಪ್ಸೆ ಹಣ ಕಳ್ಳತನಗೈದು ಪರಾರಿಯಾಗಿದ್ದಾರೆ. ಇನ್ನು ಬೈಕ್ ಮೇಲೆ ಬಂದಿದ್ದ ಮೂವರಿಂದ ಕೃತ್ಯ ನಡೆದಿದ್ದು, ಬ್ಯಾಂಕ್ ನಿಂದ ಹಣ ಪಡೆದು ಕಾರಿನಲ್ಲಿ ಬ್ಯಾಗ್ ಇಟ್ಟಿದ್ದರು. ಬ್ಯಾಗ್ ಸಮೇತ 18ಲಕ್ಷ ಹಣ ಎಗರಿಸಿ ಖದೀಮರು ಕಾಲ್ಕಿತ್ತಿದ್ದಾರೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.