ಮಕ್ಕಳ ಕಲಾ ಪ್ರತಿಭೆ ಪ್ರೋತ್ಸಾಹಹಿಸುವ ಕಾರ್ಯ ಪ್ರಾಥಮಿಕ ಶಾಲೆಯಿಂದಲೇ ಆಗಬೇಕು..!
ಇಂಡಿ : ಇಂದು ಮಕ್ಕಳಲ್ಲಿ ಸುಪ್ತವಾಗಿರುವ ಸ್ರಜನಶೀಲ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಪ್ರಾಥಮಿಕ ಶಾಲಾ ಹಂತದಿಂದಲೇ ಆದಾಗ ಮಾತ್ರ ಮಕ್ಕಳ ಪ್ರತಿಭೆ ಹೊರಬರಲು ಸಾಧ್ಯ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಹೀರಾಪೂರ ಹೇಳಿದರು.
ತಾಲೂಕಿನ ವಿಜಯನಗರ ಎಲ್. ಟಿ 2 ದಲ್ಲಿ ನಡೆದ ಹಡಲಸಂಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಸರಕಾರ ಇಂದು ಗ್ರಾಮೀಣ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗಾಗಿ ಅನೇಕ ಈ ರೀತಿಯ ಯೋಜನೆ ಹಮ್ಮಿಕೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ಉನ್ನತಿಗೆ ಪ್ರಯತ್ನ ಮಾಡುತ್ತಿದೆ ಎಂದರು, ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಈ ರೀತಿಯ ಪಠ್ಯೇತರ ಚಟುವಟಿಕೆ ಗಳ ಮೂಲಕ ಮಕ್ಕಳು ಸಾಂಸ್ಕೃತಿಕ, ಸಾಹಿತ್ಯಿಕ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮ ದ ಅಧ್ಯಕ್ಷ ಆರ್. ಎನ್. ಬಗಲಿ ಮಾತನಾಡುತ್ತ ಪ್ರತಿಭಾವಂತ ಮಕ್ಕಳನ್ನು ಉತ್ತೇಜನ ನೀಡುವ ಕೆಲಸ ಶಿಕ್ಷಕರು ಮಾಡಬೇಕಿದೆ ಎಂದರು.
ಗ್ರಾಮದ ಹಿರಿಯರಾದ ಪೂಜಾರಿ ಗುರುಗಳು, ವಿವಿಧ ಶಾಲೆಗಳ ಮುಖ್ಯ ಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಎನ್. ಡಿ ಹಾವನೂರ ಸ್ವಾಗತಿಸಿದರು. ಶಾರದಾ ನಾಯಕ ನಿರೂಪಿಸಿದರು, ಶೈಲಜಾ ವಂದಿಸಿದರು.
ಫೋಟೋ ಫೈಲ್:
1 ಸರಸ್ವತಿ ಭಾವಚಿತ್ರ ಕ್ಕೆ ದೀಪ ಪ್ರಜ್ವಲನ ಮೂಲಕ ಸ್ಪರ್ಧೆ ಗೆ ಚಾಲನೆ
2 ಬಂಜಾರಾ ವೇಷಭೂಷಣ ದಲ್ಲಿ ವಿದ್ಯಾರ್ಥಿಗಳು