ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ : ಮಾರುತಿ ಹುಜೂರಾತಿ..
ಅಫಜಲಪುರ : ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಗೆ ಬೆಲೆ ಕಟ್ಟಲಾಗದು. ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಇದನ್ನು ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜೂರಾತಿ ಹೇಳಿದರು.
ಅವರು ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಫಜಲಪುರ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಮಣ್ಣೂರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಣ್ಣೂರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಪ್ರೌಢ ಹಾಗೂ ಉನ್ನತ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋಕೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ವ್ಯಕ್ತಿತ್ವ ವಿಕಸನ ಸಾಧ್ಯವಿದೆ. ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅವರನ್ನು ಗುರ್ತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಇದಕ್ಕೆ ಪಾಲಕರ-ಪೋಷಕ ವರ್ಗ, ಸಮುದಾಯದ ಸಹಕಾರ ಅಗತ್ಯವಾಗಿದೆ. ಇಂದಿನ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾದ ಅಗತ್ಯವಿದೆ. ಆತ್ಮವಿಶ್ವಾಸ ಮೂಡಿಸಿದಲ್ಲಿ ಅವರಿಂದ ಹೆಚ್ಚಿನ ಸಾಧನೆ ನಿರೀಕ್ಷೆ ಮಾಡಬಹುದಾಗಿದೆ. ಪ್ರತಿಭಾ ಕಾರಂಜಿ ಶಿಕ್ಷಣ ಕ್ಷೇತ್ರದಲ್ಲಿ ಹೆಮ್ಮೆ ಮೂಡಿಸುವ ಕಾರ್ಯಕ್ರಮವಾಗಿದೆ. ಅದೇ ರೀತಿ ಕಲಿಕೋತ್ಸವವವು ವಿದ್ಯಾರ್ಥಿಗಳ ವಿಶೇಷ ಪ್ರತಿಭೆ ಗುರುತಿಸಲು ಇರುವ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆರತಿ ಬಸವರಾಜ ಜನ್ನಾ ಉಪಾಧ್ಯಕ್ಷ ಬಿ ರಾಜು ಬೆನಕನಹಳ್ಳಿ.ವಾಯ್ ವಿ ಗುಡಮಿ ಎಸ್ ಡಿ ಎಂ ಸಿ ಅದ್ಯಕ್ಷ ವಿಠ್ಠಲ ಅಲ್ಲಾಪೂರ. ಮುಖ್ಯೋಪಾಧ್ಯಾಯ ಸುರೇಶ ಕೋರಚಗಾಂವ ಮಾದರಿ ಶಾಲೆ ಮುಖ್ಯ ಗುರು ವಿಶ್ವನಾಥ ರೋಡಗಿ ಗ್ರಾ ಪಂ ಸದಸ್ಯರಾದ ಬಸವರಾಜ ವಾಯಿ,ಲಾಡ್ಲೇಮಶಾಕ ಗೌರ
ಮುಖಂಡರಾದ ಅಪ್ಪಾಸಾಬ ಹೊಸೂರಕರ ಮಲಕಣ್ಣ ಹೊಸೂರಕರ ಶರಣಪ್ಪ ಸುತಾರ ಬಸವರಾಜ ಜನ್ನಾ ಮಹಾಂತೇಶ ಕರೂಟಿ,ಮಹಾದೇವ ಪ್ಯಾಟಿ, ಕಾಶೀನಾಥ ಜೇವೂರ,ಗುಳುರಾಯ ಬುರುಡ ಸಂಗನಬಸವ ಆಲೂರ ಗಂಗಾಧರ ಸಂಖ ಯಲ್ಲಪ್ಪ ನಡುವಿನಕೇರಿ, ಗಡ್ಡೆಪ್ಪ ಬಸ್ಸಿನಕರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಗಾಂಧಿ ದಫೇದಾರ ರಾಜಕುಮಾರ ಗುಣಾರಿ ಸಂಗಮೇಶ ಮ್ಯಾಳೇಶಿ ಮಹೇಶ ಅಂಜುಟಗಿ, ಹೈದರಸಾಬ ಚೌಧರಿ ಜಗದೇವಪ್ಪ ಸಾತಲಗಾಂವ ಸಿ ಆರ್ ಪಿ ಶಿವಾನಂದ ದ್ಯಾಮಗೊಂಡ ಬಿ ಆರ್ ಪಿ ನವೀನಗೌಡ, ಬಾಳಾಸಾಹೇಬ ಬಿರಾದಾರ, ಶಿವಪುತ್ರ ಬಾಕೆ ಭೀಮಣ್ಣ ವಾಯಿ ಗೈಬುಸಾಬ ಆಳಂದ ಚನ್ನನಗೌಡ ಮಾಲಿಪಾಟೀಲ ಶ್ರೀಶೈಲ ಸನದಿ ಮರೆಪ್ಪ ಶಿಂದೆ, ದತ್ತಪ್ಪ ಡೊಂಬಾಳೆ,ಅಲ್ಲಾಬಕ್ಷ ಚೌಧರಿ, ಸಲೀಮ ಜಮಾದಾರ ಕಲಾವತಿ ಕೊಳಲಗಿ ಭಾಗೀರಥಿ ಬಿರಾದಾರ ನಾಗಣ್ಣ ಡಾಂಗೆ ಚಕ್ರವರ್ತಿ ಬಸ್ಸಿನಕರ ಸೇರಿದಂತೆ ಮಣ್ಣೂರ ಕ್ಲಸ್ಟರ್ ನಲ್ಲಿ ಬರುವ ಶಾಲೆಗಳ ಸರ್ವ ಶಿಕ್ಷಕ ವೃಂದದವರು ಎಸ್ ಡಿ ಎಂ ಸಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ವಿದ್ಯಾರ್ಥಿಗಳಿದ್ದರು.
ವರದಿ : ಉಮೇಶ್ ಅಚಲೇರಿ, ಅಫಜಲಪುರ/ಕಲ್ಬುರ್ಗಿ..