ವಿದ್ಯಾಬ್ಯಾಸವೆಂದರೆ ಬದುಕಿನ ಬೆಳಕು..!
ಇಂಡಿ : ವಿದ್ಯಾಭ್ಯಾಸವೆAದರೆ ಬದುಕಿಗೆ ಬೆಳಕು ತರುವ ಶಕ್ತಿ. ನಮ್ಮ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿರುವುದು ಹೆಮ್ಮೆವಿಷಯ. ಇವರೆಲ್ಲರ ಸಾಧನೆ ಇತರರಿಗೂ ಪ್ರೇರಣೆ ನೀಡಲಿ. ಈ ಸನ್ಮಾನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ತುಂಬಿಲಿ ಎಂದು ಧರ್ಮಗುರು ಮೌಲಾನಾ ಜಿಯಾವುಲ್ ಹಕ್ ಉಮರಿ ಹೇಳಿದರು.
ಪಟ್ಟಣದ ಬಿ.ಎಲ್.ಈ ಅಸೋಸಿಯೇಶನ ಇಂಡಿ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉರ್ದು ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ದ್ವಿತಿಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪಟ್ಟಣದ ಶಮ್ಸ್ ಶಾಲೆಯ ಸಭಾ ಭವನದಲ್ಲಿ ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನ ಗಳಿಸಿದ ಶಮ್ಸ್ ಪ್ರೌಢ ಶಾಲೆ ಇಂಡಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ.ಎಲ್.ಈ ಅಸೋಸಿಯೇಶನ ಉಪಾಧ್ಯಕ್ಷರಾದ ಹಸನ ಮುಜಾವರ ಸನ್ಮಾನಿಸಿದರು.
ಮುಫ್ತಿ ಅಬ್ದುರಹಮಾನ್ ಅರಬ್ , ನಿವೃತ್ತ ಪ್ರಾಂಶುಪಾಲ ಅಂಜುಮನ್ ಉರ್ದೂ ಟಿಟಿಐ ಕಾಲೇಜಿನ ಬಾಬು ಸಾಬ್ ಸೌದಾಗರ್ ,ಬಿ.ಎಲ್.ಈ ಸಂಸ್ಥೆಯ ಉಪಾಧ್ಯಕ್ಷ ಹಸನ ಮುಜಾವಾರ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ಜಹಾಂಗೀರ್ ಸೌದಾಗರ್, ಅಬ್ದುಲ್ ರಶೀದ್ ಮುಗಲಿ, ನಿವೃತ್ತ ಶಿಕ್ಷಕ ಫಾರೂಕ್ ತುರ್ಕಿ, ಅಬ್ದುಲ್ ರಶೀದ್ ಅರಬ್, ಅಬ್ಬು ಮಲ್ಲಾ, ರಫೀಕ್ ಜಾಂಬಗಿ, ಶಕೀಲಹಮದ ಅರಬ್ ಮತ್ತಿತರಿದ್ದರು.
ಇಂಡಿ ಪಟ್ಟಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉರ್ದು ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ದ್ವಿತಿಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪಟ್ಟಣದ ಶಮ್ಸ್ ಶಾಲೆಯ ಸಭಾ ಭವನದಲ್ಲಿ ಗೌರವಿಸಲಾಯಿತು.