ಇಂಡಿ : ಜೀವನದ ಮಹತ್ವದ ಘಟ್ಟವಾದ ಕಾಲೇಜ ಜೀವನದಲ್ಲಿ ವಿಧ್ಯಾರ್ಥಿಗಳು ಸ್ವಾಭಿಮಾನಿಯಾಗಿ ಬದುಕು ನಡೆಸಲು ಶಿಕ್ಷಣ ಕಲಿಬೇಕು. ಇಲ್ಲದಿದ್ದರೆ ಶಿಕ್ಷಣ ಕಲಿತಿದ್ದು ವ್ಯರ್ಥವಾಗುತ್ತದೆ ಎಂದು ಪ್ರೋ. ಎಸ್ ಎಸ್ ದೇಸಾಯಿ ಹೇಳಿದರು.
ತಾಲೂಕಿನ ಝಳಕಿ ಸರಕಾರಿ ಪ್ರಥಮ ದರ್ಜೇ ಕಾಲೇಜನ ಆವರಣದಲ್ಲಿ ಬಿಎ, ಬಿಕಾಂ,ಬಿಎಸ್ಸಿ ಅಂತಿಮ ವರ್ಷದ ವಿಧ್ಯಾರ್ಥಿಗಳ ಸಮಾರೋಪ ಸಮಾರಂಭ ಮತ್ತು ಬಿಳ್ಕೋಡುವ ಸಮಾರಂಭದಲ್ಲಿ ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ನೇರವೇರಿಸಿ ಮಾತನಾಡಿದರು.
ಗ್ರಾ ಪಂ ಮಾಜಿ ಅಧ್ಯಕ್ಷ ಸಣ್ಣಪ್ಪ ತಳವಾರ ಮಾತನಾಡಿ, ಗಡಿ ಭಾಗದ ಝಳಕಿ ಗ್ರಾಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ
“ಶಿಕ್ಷಣ ಕಾಶಿಯಾಗಲು” ಶಾಸಕರ ಪಾತ್ರ ಬಹಳ ಮುಖ್ಯವಾಗಿದೆ. ಇಲ್ಲಿ ಸರಕಾರಿ ಪ್ರಥಮ ದರ್ಜೇ ಕಾಲೇಜ, ಸರಕಾರಿ ಪದವಿ ಪೂರ್ವ ಕಾಲೇಜ, ಸರಕಾರಿ ಪಾಲಿಟೆಕ್ನಿಕ ಕಾಲೇಜ, ಬಾಲಕಿಯರ ವಸತಿ ನಿಲಯ, ಬಾಲಕರ ವಸತಿ ನಿಲಯ ಹೀಗೆ ಅನೇಕ ಶೈಕ್ಷಣ ಕವಾಗಿ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಅದ್ದರಿಂದ ಭಾಗದಲ್ಲಿ ಸುಮಾರು 2 ಸಾವಿರ ವಿಧ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅದಕ್ಕೆ ಬೇಕಾಗಿರುವ ಬೃಹತ ಕಟ್ಟಡ ಹಾಗೂ ಮೂಲ ಸೌಕರ್ಯ ಎಲ್ಲವೂ ಒದಗಿಸಿದ್ದು ಕಂಡರೆ ಶಾಸಕರಿಗೆ ಕ್ಷೇತ್ರದ ಅಪಾರ ಕಾಳಜಿವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ. ವಿವೇಕಾನಂದ ಉಘಡೆ, ನಾರಾಯಣ ಜಾಗೀರದಾರ, ಗ್ರಾ ಪಂ ಸದಸ್ಯ ಶಂಕರಗೌಡ ಬಿರಾದಾರ, ಡಾ. ಸಂತೋಷ ದಂಡ್ಯಾಗೋಳ, ಅನೀಲ ಬಿರಾದಾರ, ಸಚೀನ ಮಂಚಲಕರ,ಡಾ. ಅವಿನಾಶ ಟಿ, ಗುರಣಗೌಡ ಪಾಟೀಲ, ಡಾ, ಹುಷೇನಭಾಷ , ಶ್ರೀಮತಿ ಸ್ಪೂರ್ತಿ , ಶ್ರೀಮತಿ ಸಮೀರಾ, ರಿಯಾಜ ದೇಗನಾಳ, ಇತತರು ಇದ್ದರು.
ಝಳಕಿ ಸರಕಾರಿ ಪ್ರಥಮ ದರ್ಜೇ ಕಾಲೇಜನ ಆವರಣದಲ್ಲಿ ಬಿಎ, ಬಿಕಾಂ,ಬಿಎಸ್ಸಿ ಅಂತಿಮ ವರ್ಷದ ವಿಧ್ಯಾರ್ಥಿಗಳ ಸಮಾರೋಪ ಸಮಾರಂಭ ಮತ್ತು ಬಿಳ್ಕೋಡುವ ಸಮಾರಂಭದಲ್ಲಿ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ರವರ ಪೋಟೋ ಪೂಜೆ, ಪುಷ್ಪ ನಮನ ನೇರವೇರಿದ ಪ್ರೋ. ಎಸ್ ಎಸ್ ದೇಸಾಯಿ ರವರು ಮಾತನಾಡಿದರು.