ಸಿರಗುಪ್ಪ: ಕಬ್ಬಿಣದ ಜಿಲ್ಲೆ ಎಂದೇ ಪ್ರಖ್ಯಾತಿ ಪಡೆದ ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಹೊರವಲಯದಲ್ಲಿ ನಿರ್ಮಾಣ ವಾದ ಸರ್ಕಾರಿ ಪದವಿ ಕಾಲೇಜಿನ ನೂತನ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ನಗರದ ಬಳ್ಳಾರಿ ರಸ್ತೆ ಬಳಿಯಲ್ಲಿ ಇರುವ ತೆಕ್ಕಲಕೋಟೆ ಶ್ರೀಮತಿ ಹೊನ್ನೂರಮ್ಮ ಎಂ ಸಿದ್ದಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಬೃಹತ್ ಸಭಾಂಗಣ ಗುಣಮಟ್ಟದ ಗ್ರಂಥಾಲಯ ಕಟ್ಟಡ ಹಾಗೂ ನೂತನ ವಿಜ್ಞಾನ ತರಗತಿ ಕೊಠಡಿಗಳು ಮತ್ತು ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಕಟ್ಟಡಗಳನ್ನು ಸಿರಗುಪ್ಪ ಕ್ಷೇತ್ರದ ಶಾಸಕ ಎಂ ಎಸ್ ಸೋಮಲಿಂಗಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಚಾಲನೆಯನ್ನ ನೀಡಿದರು.
ನೂತನ ಕೊಠಡಿಗಳಾದ ವಿಜ್ಞಾನ ಪ್ರಯೋಗಾಲಯ ಗ್ರಂಥಾಲಯ ಕಟ್ಟಡಗಳನ್ನು ಗಣ್ಯರೊಂದಿಗೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಅತ್ಯಂತ ಕಷ್ಟಪಟ್ಟು ನಿಮ್ಮ ತಂದೆ ತಾಯಿಗಳು ಮತ್ತು ಪಾಲಕ ಪೋಷಕರು ಉತ್ತಮ ವಿದ್ಯಾಭ್ಯಾಸ ಮಾಡಲಿ ಎಂಬ ಉದ್ದೇಶದಿಂದ ಕಾಲೇಜಿಗೆ ಕಳಿಸಿರುತ್ತಾರೆ. ವಿದ್ಯಾರ್ಥಿಗಳು ಅತ್ಯಂತ ಶ್ರದ್ಧೆಯಿಂದ ಪಾಠ ಪ್ರವಚನ ಕೇಳಿ ಉತ್ತಮ ವಿದ್ಯಾಭ್ಯಾಸ ಮಾಡಿ ಶಾಲೆಗೂ ಹಾಗೂ ತಂದೆ ತಾಯಿಗಳು ಹಾಗೂ ತಮ್ಮ ಗ್ರಾಮಕ್ಕೂ ಕೀರ್ತಿ ತರಬೇಕು ಹಾಗೂ 33 ಇಲಾಖೆಗಳಲ್ಲಿಯೂ ಸಹ ಅನೇಕ ಹುದ್ದೆಗಳಿದ್ದು ತಾವುಗಳು ಅಂತಹ ಉದ್ಯೋಗಗಳನ್ನು ಪಡೆಯಬೇಕು. ದೇಶದಲ್ಲಿ ವಿದ್ಯಾಭ್ಯಾಸದ ಗುಣಮಟ್ಟಕ್ಕೆ ಕೇರಳ ಒಂದನೇ ಸ್ಥಾನದಲ್ಲಿದೆ. ಅದರಂತೆ ಎಲ್ಲರೂ ವಿದ್ಯೆ ಕಲಿಯುವ ಮೂಲಕ ನಮ್ಮ ರಾಜ್ಯವನ್ನು ಸಹ ಮೊದಲ ಸ್ಥಾನಕ್ಕೆ ಒಯ್ಯಬೇಕಾಗಿದೆ. ಆದ್ದರಿಂದ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಬಿಜೆಪಿ ಅಧ್ಯಕ್ಷ ಆರ್ ಸಿ ಪಂಪನಗೌಡ, ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಸಿರಿಗೆರೆ ಮಲ್ಲನಗೌಡ, ಮುಖಂಡರಾದ ಮಹಾದೇವ ವಿರುಪಾಕ್ಷಪ್ಪ ಗುತ್ತಿಗೆದಾರ, ನಾಗಭೂಷಣ ಕಾಲೇಜಿನ ಉಪನ್ಯಾಸಕರು ಗಳಾದ ರುದ್ರಪ್ಪ ಚಾಗಿ, ವಿರೇಶಗೌಡ, ರಾಮಕೃಷ್ಣ, ಯಮನೂರಪ್ಪ, ಮಹೇಶ್ವರಿ, ಅಂಬುತಾಯಿ, ರಮಣ ಪೂಜಾರಿ, ಮಹಾದೇವ, ಪವನ್ ಕೊಟ್ರಪ್ಪ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.