ಅವಳಿ ಜಿಲ್ಲೆಯ ಪ್ರಜಾ ಪ್ರಗತಿಯ ಪತ್ರಕರ್ತರಿಂದ: ಸಂಪಾದಕ ಎಸ್ ನಾಗಣ್ಣಗೆ ಗೌರವ ಸನ್ಮಾನ..!
ವಿಜಯಪುರ : ಅವಳಿ ಜಿಲ್ಲೆಯ ಪತ್ರಕರ್ತರಿಂದ ರಾಜ ಮಟ್ಟದ ಪ್ರಜಾ ಪ್ರಗತಿ ಕನ್ನಡ ದಿನ ಪತ್ರಿಕೆ ಪ್ರಧಾನ
ಸಂಪಾದಕ ಎಸ್ ನಾಗಣ್ಣಗೆ ಅವರಿಗೆ ತುಮಕೂರಿನ ಪ್ರಜಾ ಪ್ರಗತಿ ಕಛೇರಿಯಲ್ಲಿ ಸನ್ಮಾನಿಸಲಾಯಿತು.
ಮಂಗಳವಾರ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ಪ್ರಜಾ ಪ್ರಗತಿ ವರದಿಗಾರರು ಸಿದ್ದಗಂಗಾ ಮಠದಲ್ಲಿ ದರ್ಶನ ಪಡೆದರು. ತದನಂತರ ಪ್ರಜಾ ಪ್ರಗತಿ ಕಛೇರಿಗೆ ಭೇಟಿ ನೀಡಿ ಸಂಪಾದಕರಿಗೆ ನಡೆದಾಡುವ ದೇವರು ಎಂದೆ ಖ್ಯಾತಿಯ ಸಿದ್ದೇಶ್ವರ ಭಾವಚಿತ್ರ ನೀಡುವ ಮೂಲಕ ಪ್ರಜಾ ಪ್ರಗತಿ ಬಳಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಜಾ ಪ್ರಗತಿ ಸಂಪಾದಕ ಎಸ್ ನಾಗಣ್ಣ ಅವರು ಮಾತನಾಡಿದ, ನಿರ್ಭಿತಿ, ಪಾರದರ್ಶಕ ಮತ್ತು ವಸ್ತು ನಿಷ್ಠ ವರದಿಯನ್ನು ಹಾಗೂ ಸಾಮಾಜಿಕ ಕಳಕಳಿವುಳ್ಳ ವರದಿಯನ್ನು ಮಾಡಬೇಕು. ಅದಲ್ಲದೇ ಯಾವುದೇ ವ್ಯಕ್ತಿಗಳನ್ನು ಗುರಿಯಾಗಿಸದೆ, ಇನ್ನೊಬ್ಬರಿಗೆ ತೊಂದರೆ ನೀಡದಂತೆ, ಅತ್ಯಂತ ನೊಂದ ವ್ಯಕ್ತಿಗಳಿಗೆ ಧ್ವನಿಯಾಗಿ, ಸಮಾಜದ ಕಟ್ಟ ಕಡೆಯ ವ್ಯಕ್ತಿ, ವಸ್ತುವಿನ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿ ಎಂದು ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ರವಿ ಕುಮಾರ್, ವಿಜಯಪುರ ಜಿಲ್ಲಾ ವರದಿಗಾರ ಗೋಪಾಲ ಕನಮನಿ, ಸಿಂದಗಿ ತಾಲೂಕು ವರದಿಗಾರ ಮಲ್ಲು ಅಲ್ಲಾಪೂರ, ಮುದ್ದೇಬಿಹಾಳ ತಾಲೂಕು ವರದಿಗಾರ ಬಸವರಾಜ ಈ ಕುಂಬಾರ, ಇಂಡಿ ತಾಲೂಕು ವರದಿಗಾರ ಶಂಕರಲಿಂಗ ಜಮಾದಾರ, ಬಾಗಲಕೋಟೆಯ ಹುಚ್ಚೇಶ, ಜಮಖಂಡಿ ಕೇದಾರ, ಹುಬ್ಬಳ್ಳಿ ಮುಸ್ತಾಕ ಉಪಸ್ಥಿತರಿದ್ದರು.