ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ಅಪರಾಧ ಹಿನ್ನೆಲೆ ಪತ್ತೆ ಸುಲಭ |
ನಗರದಲ್ಲಿ ಎಮ್ಸಿಸಿಟಿಎನ್ಎಸ್ ಜಾರಿ
ಅಪರಾಧಗಳ ಹಿನ್ನೆಲೆ ಪತ್ತೆಗೆ ಆಪ್ ಬಳಕೆ
ಇಂಡಿ : ನಗರ ಪೋಲಿಸ್ ಇಲಾಖೆ ನಗರದಲ್ಲಿ ಅಪರಾಧ ನಿಯಂತ್ರಿಸಲು ಹೊಸದಾರಿ ಕಂಡು ಕೊಂಡಿದೆ. ಎಮ್ಸಿಸಿಟಿಎನ್ಎಸ್ ಮೊಬೈಲ ಕ್ರೆöÊಂ ಆಂಡ್ ಕ್ರಿಮಿನಲ್ ಆಂಡ್ ಟ್ರಾö್ಯಕಿಂಗ್ ಸಿಸ್ಟಮ್ ಆಪ್ ಮುಖಾಂತರ ಅನುಮಾನಾಸ್ಪದ ವ್ಯಕ್ತಿಗಳ ಪತ್ತೆ ಶುರು ಮಾಡುವ ಕೆಲಸ ಆರಂಭಿಸಿದ್ದಾರೆ.
ಪಟ್ಟಣದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ೧೧ ರ ನಂತರ ಕಳ್ಳತನ ಮತ್ತು ಅಪರಾಧ ಪ್ರಕರಣ ಸಂಖ್ಯೆ ತಡೆಯುವ ಸಲುವಾಗಿ ನಗರ ಪೋಲಿಸ ಇಲಾಖೆ ಬೀಟ್ ಪೋಲಿಸರಿಗೆ ಮೊಬೈಲ ಕ್ರೆöÊಂ ಆಂಡ್ ಕ್ರಿಮಿನಲ್ ಆಂಡ್ ಟ್ರಾö್ಯಕಿಂಗ್ ಸಿಸ್ಟಮ್ ಆಪ್ ಮೂಲಕ ಅನುಮಾನಾಸ್ಪದ ಆರೋಪಿಗಳ ಪತ್ಯೆಗೆ ಮುಂದಾಗಿದೆ. ಈ ಆಪ್ ನಲ್ಲಿ ಕೇವಲ ಫಿಂಗರ್ ಪ್ರಿಂಟನಿAದ ವ್ಯಕ್ತಿಯ ಅಪರಾಧದ ಪೂರ್ವಾಪರ ತಿಳಿಯುತ್ತದೆ. ಇದರಿಂದ ಮುಂದಾಗುವ ಅಪರಾಧ ಗಳನ್ನು ಮೊದಲೇ ಮುಟ್ಟಿ ಹಾಕಬಹುದು.
ನಗರದ ಹಲವು ಕಡೆ ತಡ ರಾತ್ರಿಯ ವರೆಗೆ ಹಲವು ಜನರು ಓಡಾಟ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ರಾತ್ರಿ ೧೧ ರ ನಂತರ ಮಾರುಕಟ್ಟೆ ಸೇರಿ ಎಲ್ಲೆಡೆ ಅಂಗಡಿ ಮುಗ್ಗಟ್ಟು ಮುಚ್ಚಲಾಗುತಿದೆ. ಇದಾದ ನಂತರ ಅಲ್ಲಲ್ಲಿ ಜನರ ಓಡಾಟ ಕಂಡು ಬರುತ್ತಿದೆ. ಕೆಲವು ಬಾರಿ ಸಾಮಾನ್ಯ ಜನರಂತೆ ಅಪರಾಧಿಗಳು ರಾತ್ರಿ ಓಡಾಡುವ ಮೂಲಕ ಮುಂದಿನ ಅಪರಾಧ ಕೃತ್ಯಗಳ ಕುರಿತು ಉಪಾಯ ಹಾಕುತ್ತಾರೆ. ಈ ವೇಳೆ ಯಾರು ಜನಸಾಮಾನ್ಯರು ಅಥವಾ ಯಾರು ಅಪರಾಧ ಹಿನ್ನೆಲೆ ಇರುವವರು ಎಂಬುದು ತಿಳಿಯುವದಿಲ್ಲ. ಇಂತಹ ವೇಳೆ ಈ ಆಪ್ ಪೂರ್ಣ ರೂಪದಲ್ಲಿ ಸಹಕಾರಕ್ಕೆ ಬರುತ್ತದೆ. ಇದರಿಂದ ಆರೋಪಿಗಳ ಪೂರ್ವಪರ ತಿಳಿದುಕೊಂಡು ಅವರಿಂದ ಆಗುವ ಅಪರಾಧಗಳನ್ನು ತಪ್ಪಿಸಲು ಅನುಕೂಲವಾಗಲಿದೆ.
ರಾತ್ರಿ ಬೀಟ್ ಸೇರಿ ಸುರಕ್ಷತೆ ಕೆಲಸ ಮಾಡುವ ಪೋಲಿಸ ಸಿಬ್ಬಂದಿ ಬಳಿ ಫಿಂಗರ ಪ್ರಿಂಟ್ ಸ್ಕಾö್ಯನ್ ಇರುವ ಡಿವೈಸ ಇರುತ್ತದೆ. ಇದನ್ನು ಇಂಟರ್ ನೆಟ ಮೂಲಕ ಜೋಡಿಸಿ ಕೇಂದ್ರ ಸರಕಾರ ಅಪರಾಧಿ ಡಿಜಿಟಲ್ ದಾಖಲೆಗಳ ಜೊತೆ ಜೋಡಣೆ ಮಾಡಲಾಗುತ್ತಿದೆ.
ಯಾವದೇ ವ್ಯಕ್ತಿಯ ಫಿಂಗರ್ ಪ್ರಿಂಟ್ ಸ್ಕಾö್ಯನ ಮಾಡುತ್ತಲೇ ತಮ್ಮಲ್ಲಿನ ಡಿಜಿಟಲ್ ದಾಖಲೆಗಳಲ್ಲಿನ ಫಿಂಗರ ಪ್ರಿಂಟ ಜೊತೆ ಮ್ಯಾಚ ಮಾಡುತ್ತ ಹೋಗುತ್ತದೆ. ಇಲ್ಲಿ ಸಾಮಾನ್ಯ ವ್ಯಕ್ತಿಯೊ ಅಥವಾ ಈತನ ವಿರುದ್ಧ ಈ ಹಿಂದೆ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಕುರಿತು ಮಾಹಿತಿ ದೊರೆಯುತ್ತದೆ.
ರಾತ್ರಿ ನಗರದಲ್ಲಿ ಅಪರಾಧಗಳ ಸಂಖ್ಯೆ ಇಳಿಕೆ ಮಾಡಲು ಸಿಬ್ಬಂದಿ ಹಾಗೂ ಅಧಿಕಾರಿಗಳು ಎಮ್ಸಿಸಿಟಿಎನ್ಎಸ್ ಆಪ ಬಳಕೆ ಮಾಡುತ್ತಿದ್ದಾರೆ.ರಾತ್ರಿ ವೇಳೆ ಅನಾವಶ್ಯಕವಾಗಿ ಅಪರಾಧ ಹಿನ್ನೆಲೆ ಹೊಂದಿರುವವರು ಓಡಾಡುವುದನ್ನು ಇದರಿಂದ ತಡೆಯಬಹುದು. ಅಲ್ಲದೆ ಅಪರಾಧಗಳ ಸಂಖ್ಯೆ ಇಳಿಕೆ ಮಾಡಲು ಸಹಕಾರಿಯಾಗುತ್ತದೆ.
ಪಿಐ ರತನಕುಮಾರ ಜಿರಗ್ಯಾಳ