Voice Of Janata EDITOR :
ಸ್ಯಾಂಡಲ್‌ವುಡ್‌ಗೆ ಆಘಾತ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕರ್ನಾಟಕದ ಕುಳ್ಳ ಎಂದೇ ಹೆಸರುವಾಸಿಯಾಗಿದ್ದ ದ್ವಾರಕೀಶ್ ಅವರ ನಿಧನ ಸ್ಯಾಂಡಲ್‌ವುಡ್‌ಗೆ ಆಘಾತವನ್ನುಂಟು ಮಾಡಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ 1942 ಆಗಸ್ಟ್ 19ರಂದು ಬಂಗಲೆ ಶ್ಯಾಮರಾವ್ ಹಾಗೂ ಜಯಮ್ಮ ದಂಪತಿ ಪುತ್ರರಾಗಿ ಜನಿಸಿದ ದ್ವಾರಕೀಶ್ ಅವರು, 1967ರಲ್ಲಿ ಅಂಬುಜಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಗಿರಿ ಹಾಗೂ ಯೋಗೇಶ್ ಎಂಬ ಇಬ್ಬರು ಪುತ್ರರಿದ್ದಾರೆ.
ಅಚ್ಚರಿ ಏನೆಂದರೆ ನಟಿ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ಏಪ್ರಿಲ್ 16, 2021ರಂದು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದರು. ಇದೀಗ ಅವರ ಪತ್ನಿ ಮೃತಪಟ್ಟು ಮೂರು ವರ್ಷಗಳು ಸಂದಿದ್ದು, ಅದೇ ದಿನದಂದು ನಟ ದ್ವಾರಕೀಶ್ ಇಹಲೋಕ ತ್ಯಜಿಸಿದ್ದಾರೆ. ಅಚ್ಚರಿ ಎಂಬಂತೆ ಅವರ ಪತ್ನಿ ನಿಧನದ ದಿನವೇ ದ್ವಾರಕೀಶ್ ಸ್ವರ್ಗಸ್ಥರಾಗಿದ್ದಾರೆ.