ಶ್ರೀ ಸಿದ್ದೇಶ್ವರ ಅನ್ನ ದಾಸೋಹ ಸೇವೆಗೆ ಚಾಲನೆ
ವಿಜಯಪುರ: ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ನಿತ್ಯ ನಡೆಯಲಿರುವ ಶ್ರೀ ಸಿದ್ದೇಶ್ವರ ಅನ್ನ ದಾಸೋಹ ಸೇವೆಗೆ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಸೋಮವಾರ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.
ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಪರ ಸ್ಥಳದಿಂದ ಬಂದಂತ ಭಕ್ತಾಧಿಗಳಿಗೆ, ಪ್ರವಾಸಿಗರಿಗೆ, ರುದ್ರಾಭಿಷೇಕ ಮಾಡಿಸುವ ಭಕ್ತಾಧಿಗಳಿಗೆ ನಿತ್ಯ ದಾಸೋಹ ಸೇವೆ ಕಲ್ಪಿಸಲಾಗುತ್ತದೆ. ಪ್ರಾರಂಭೋತ್ಸವ ದಿನದ ದಾಸೋಹ ಸೇವೆಯನ್ನು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಕುಟುಂಬದಿಂದ ನೆರವೇರಿಸಿದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ನಿರ್ದೇಶಕರಾದ ಬಸವರಾಜ ಸೂಗೂರ, ಸದಾಶಿವ ಗುಡ್ಡೋಡಗಿ, ಎನ್.ಎಂ.ಗೊಲಾಯಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಮಲಕಪ್ಪ ಗಾಣಿಗೇರ, ಸಾಯಿಬಣ್ಣ ಭೋವಿ, ವಿಜಯಕುಮಾರ ಡೋಣಿ, ಎಸ್.ಎಸ್.ನಾಡಗೌಡ, ಸುದೀರ ಚಿಂಚಲಿ, ಮುಖಂಡರಾದ ಸಿದ್ರಾಮಪ್ಪ ಉಪ್ಪಿನ ಸೇರಿದಂತೆ ಧಾರ್ಮಿಕ ಸಮಿತಿ ಸದಸ್ಯರುಗಳು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ನಿತ್ಯ ನಡೆಯಲಿರುವ ಶ್ರೀ ಸಿದ್ದೇಶ್ವರ ಅನ್ನ ದಾಸೋಹ ಸೇವೆಗೆ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರು ಹಾಗೂ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಸೋಮವಾರ ಚಾಲನೆ ನೀಡಿದರು.