ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ..!
ವರದಿ: ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು:ತಾಲೂಕಿನ ಮಲೆಮಹದೇಶ್ವರ ದೇವಸ್ಥಾನದ ಪ್ರಾಧಿಕಾರಕ್ಕೆ ಸೇರಿರುವ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ವಡೆಕಹಳ್ಳ ಗ್ರಾಮದ ಸಮೀಪದ ಹಳ್ಳಕ್ಕೆ ಇಳಿದಿರುವ ಘಟನೆ ನಡೆದಿದೆ. ಈ ವೇಳೆ ಅದೃಷ್ಟವಶಾತ್
ಈ ಅಪಘಾತದಲ್ಲಿ ಯಾವುದೇ. ಎಲ್ಲಾ ಪ್ರಯಾಣಿಕರೂ ಸುರಕ್ಷಿತವಾಗಿ ಪಾರಾಗಿದ್ದಾರೆ.
ಹನೂರು ತಾಲೂಕಿನ ಬಿದರಹಳ್ಳಿಯಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಬಸ್ ಮರಳಿ ಮಹದೇಶ್ವರಬೆಟ್ಟದತ್ತ ತೆರಳುತ್ತಿತ್ತು. ಈ ವೇಳೆ, ವಡೆಕಹಳ್ಳ ಬಸ್ ನಿಲ್ದಾಣದ ಸಮೀಪ ಚಾಲಕನ ನಿಯಂತ್ರಣ ತಪ್ಪಿ, ವಾಹನ ರಸ್ತೆಯ ಅಂಚಿನ ಹಳ್ಳಕ್ಕೆ ಇಳಿದಿದೆ.
ಈ ವೇಳೆ ಬಸ್ ರಸ್ತೆಯಲ್ಲಿ ಅಡ್ಡಲಾಗಿ ನಿಂತ ಕಾರಣ, ಈ ಮಾರ್ಗದಲ್ಲಿ ಸಂಚಾರಕ್ಕೆ ತೊಂದರೆಯುಂಟಾಯಿತು. ಸ್ಥಳೀಯರು ತಕ್ಷಣ ಸ್ಪಂದಿಸಿ ಹಿಟಾಚಿ ಯಂತ್ರದ ಸಹಾಯದಿಂದ ಬಸ್ ಅನ್ನು ಹೊರತೆಗೆದು ವಾಹನಗಳ ಸಂಚಾರವನ್ನು ಪುನರಾರಂಭಿಸಲು ಸಹಕರಿಸಿದರು.