ತಾಳ ಬೆಟ್ಟದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ : ಶಾಸಕ ಎಂ.ಆರ್ ಮಂಜುನಾಥ್
ವರದಿ : ಚೇತನ್ ಕುಮಾರ್ ಎಲ್ ಚಾಮರಾಜನಗರ
ಹನೂರು : ಸುಪ್ರಸಿದ್ಧ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಇಂದು ತಾಳಬೆಟ್ಟದಲ್ಲಿ ಶುದ್ದ ನೀರಿನ ಕುಡಿಯುವ ಘಟಕಕ್ಕೆ ಚಾಲನೆ ಯನ್ನು ಶಾಸಕ ಎಂ ಆರ್ ಮಂಜುನಾಥ್ ಅವರು ನೀಡಿದರು.
ನಂತರ ಮಾತನಾಡಿದ ಅವರು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡಲು ಅರಣ್ಯ ಇಲಾಖೆ ಮತ್ತು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಜೊತೆಗೂಡಿ ಪಣ ತೊಟ್ಟಿರುವುದು ಶ್ಲಾಘನೀಯವಾದ ಸಂಗಾತಿ ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘು.ಡಿ. ಆರ್.ಎಫ್ ಶಿವರಾಜ್ ,ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ,ಚಿನ್ನವೆಂಕಟ್, ವಿಜಯ್ ಕುಮಾರ್ ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಹಾಜರಿದ್ದರು.


















