ಬರ : ಕುಡಿಯುವ ನೀರಿನ ಕುರಿತು ಚರ್ಚೆ
ಇಂಡಿ : ರಾಜ್ಯ ಸರಕಾರ ಇಂಡಿ ತಾಲೂಕನ್ನು ಬರಗಾಲ
ಪ್ರದೇಶವೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬರುವ ದಿನಗಳಲ್ಲಿ ಕುಡಿಯುವ ನೀರು ಮತ್ತು ಇನ್ನಿತರ ಸಮಸ್ಯೆ ಕುರಿತು ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ ಬಿ.ಎಸ್. ಕಡಕಬಾವಿ ತಾಲೂಕಿನಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಆದ ಕಾರಣ ಸಧ್ಯದ ಪರಿಸ್ಥಿತಿ ಮತ್ತು ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಕುರಿತು
ಚರ್ಚೆ ನಡೆಸಿದರು. ಗ್ರಾ.ಪಂ ದವರು ಕುಡಿಯುವ ನೀರಿನ ಕುರಿತು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಕುಡಿಯುವ ನೀರಿನ ಮೂಲಗಳ ದುರಸ್ತಿ ಕಾರ್ಯ
ಕೈಕೊಳ್ಳಲು ತಿಳಿಸಿದರು. ದನಕರುಗಳಿಗೆ ಮೇವಿನ ಕುರಿತು ಆಗಬಹುದಾದ ತೊಂದರೆ ಮತ್ತು ಸಧ್ಯ ರೈತರ ಹೊಲಗಳಲ್ಲಿ ಬೆಳೆಗಳಿದ್ದು ಮಳೆ ಅಭಾವದ ಕಾರಣ ಬೆಳೆ
ಒಣಗುತ್ತಿದ್ದು ಬೆಳೆಹಾನಿ ಕುರಿತು ಚರ್ಚಿಸಿದರು. ಅಲ್ಲದೆ ದುಡಿಯುವ ವರ್ಗ ಗುಳೆ ಹೋಗುವದನ್ನು ತಪ್ಪಿಸಲು ಇತರೆ ಕಾಮಗಾರಿ ಪ್ರಾರಂಭಿಸುವ ಕುರಿತು ಚರ್ಚಿಸಿದರು.
ಸಭೆಯಲ್ಲಿ ಇಒ ಬಾಬು ರಾಠೋಡ, ಗ್ರಾಮೀಣ
ಕುಡಿಯುವ ನೀರು ಸರಬರಾಜು ಎಇಇ
ಎಸ್.ಆರ್.ರುದ್ರವಾಡಿ, ಕೃಷಿ ಸಹಾಯಕ ನಿರ್ದೇಶಕ
ಮಹಾದೇವಪ್ಪ ಏವೂರ, ಹಿರಿಯ ತೋಟಗಾರಿಕೆ
ನಿರ್ದೇಶಕ ಎಚ್. ಎಸ್.ಪಾಟೀಲ, ಹೆಸ್ಕಾಂ ಎಇಇ
ಎಸ್.ಆರ್.ಮೆಂಡೆಗಾರ ಮತ್ತಿತರಿದ್ದರು.
ತಾಲೂಕಾ ನೋಡಲ್ ಅಧಿಕಾರಿ ವಿಜಯಕುಮಾರ
ಮೆಕ್ಕಳಕಿ ಅಧ್ಯಕ್ಷತೆ ವಹಿಸಿದ್ದರು.