ಕೃಷ್ಣಾ ಕಾಲುವೆಯಿಂದ ಕೆರೆ ಹಳ್ಳ ಗಳಿಗೆ ನೀರು
ಇಂಡಿ : ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ
ಕಾಲುವೆಯಿಂದ ಕಳೆದ ಎಂಟು ದಿನಗಳಿಂದ
ತಾಲೂಕಿನಲ್ಲಿರುವ ಎಲ್ಲ ಕೆರೆ ಮತ್ತು ಹಳ್ಳಗಳಲ್ಲಿ
ನೀರು ಹರಿಸಲಾಗಿದೆ. ಇದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಅದಲ್ಲದೆ ಅಂತರ್ಜಲ ಹೆಚ್ಚಾಗಿ ಬಾವಿಗಳಿಗೆ, ಬೋರುಗಳಿಗೆ ನೀರು
ಹೆಚ್ಚಾಗುವದು.
ತಾಲೂಕಿನ ಸಂಗೋಗಿ, ಹಂಜಗಿ, ಲೋಣಿ ಕೆಡಿ ಮತ್ತು
ಅರ್ಜನಾಳ ಕೆರೆಗಳನ್ನು ತುಂಬಲಾಗಿದೆ.ಅದಲ್ಲದೆ ನಾದ ಕೆ.ಡಿ, ಭೈರುಣಗಿ, ಹಲಸಂಗಿ ಸೇರಿದಂತೆ ಇಂಡಿಯ ಹಳ್ಳ, ಇಂಗಳಗಿ, ನೆಹರು ನಗರ, ಹಿರೇಬೇವನೂರ, ಭೂಯ್ಯಾರ ಹಳ್ಳಗಳನ್ನು ತುಂಬಿಸಲಾಗಿದ್ದು ಅಲ್ಲಿಂದ ನೀರು ಭೀಮಾ ನದಿ ಸೇರುತ್ತಿದೆ. ಬರದಿಂದ ಕಂಗೆಟ್ಟಿರುವ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ಕುರಿತು ಕೃಷ್ಣಾ
ಮುಖ್ಯ ಕಾಲುವೆಯಿಂದ ನೀರು ಆಸರೆ ಯಾಗುತ್ತಿದೆ.
ಸಕಾಲದಲ್ಲಿ ಮಳೆ ಯಾಗದೆ ಇರುವದರಿಂದ ತಾಲೂಕಿನ ಕೆರೆ ಹಳ್ಳ ಬಾವಿ, ಬೋರು ಗಳು ಬತ್ತಿದ್ದರಿಂದ ಕುಡಿಯುವ ನೀರಿನ ಉಂಟಾಗಬಾರದೆಂದು ಕೃಷ್ಣಾ ಕಾಲುವೆಯಿಂದ ನೀರು ತುಂಬಿಸಲಾಗುತ್ತಿದೆ.
ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಕಾರ್ಯ ಪಾಲಕ ಅಭಿಯಂತರ ಶಾಂತವೀರ ಮಠ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅರವಿಂದ ಪೋಳ, ಶ್ರೀಮಂತ ಅಂಗಡಿ, ಕಿರಿಯ ಅಭಿಯಂತರ ಮಹಮ್ಮದ ಸಾಧಿಕ ಹೊನ್ನುಟಗಿ
ಈ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಕಾಲುವೆ
ನೀರು ಕೆರೆ ಹಳ್ಳಗಳಿಗೆ ಬಂದಿದೆ.
ಕೊಟ್
ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಲು
ಸರಕಾರ ಹಾಗೂ ಜಿಲ್ಲಾಧಿಕಾರಿಗಳು ಹಾಗೂ
ಜನಪ್ರತಿನಿಧಿಗಳು ಆದೇಶ ಮಾಡಿದ್ದರಿಂದ ಬಹುಹಳ್ಳಿ
ಕುಡಿಯುವ ನೀರಿನ ಯೋಜನೆ ಕೆರೆಗಳನ್ನು
ತುಂಬಿಸುವದಕ್ಕೆ ಮೊದಲ ಆದ್ಯತೆ ನೀಡಿ ಕಾಲುವೆ
ಮೂಲಕ ನೀರು ಹರಿಸಲಾಗಿದೆ. ನಾದ ಹಳ್ಳಕ್ಕೆ ನೀರು
ಹರಿಸಿದರೆ ಹಳ್ಳದ ಸುತ್ತಮುತ್ತಲಿನ 8 ರಿಂದ 9
ಹಳ್ಳಿಗಳಲ್ಲಿನ ಜನರಿಗೆ ನೀರಿನ ಅನುಕೂಲವಾಗಲಿದೆ.
ಸಾರ್ವಜನಿಕರು ಕುಡಿಯುವ ನೀರಿಗಾಗಿ ಮಾತ್ರ ನೀರು
ಬಳಕೆ ಮಾಡಿಕೊಳ್ಳಬೇಕು. ಕೃಷಿಗೆ ಬಳಕೆ
ಮಾಡಿಕೊಳ್ಳಬಾರದು ಎಂಬುದು ನನ್ನ ಮನವಿ.
ಮನೋಜಕುಮಾರ ಗಡಬಳ್ಳಿ, ಅಧಿಕ್ಷಕ ಅಭಿಯಂತರರು ಕೆಬಿಜೆಎನ್‍ಎಲ್ ರಾಂಪೂರ
ಕೋಟ್
ಸಧ್ಯ ಕೆರೆ ಮತ್ತು ಹಳ್ಳಗಳಿಗೆ ನೀರು
ತುಂಬಿರುವದು ಮುಂದಿನ ಒಂದು ತಿಂಗಳು
ಗ್ರಾಮದ ಜನರಿಗೆ ನೀರಿನ ತೊಂದರೆ ಯಾಗುವದಿಲ್ಲ.
ಮಹಮ್ಮದ ಸಾಧಿಕ ಹೊನ್ನುಟಗಿ
ಕಿರಿಯ ಅಭಿಯಂತರರು ಕೆಬಿಜೆಎನ್‍ಎಲ್ ಸಾಲೋಟಗಿ
ಅಧಿಕ್ಷಿಕ ಅಭಿಯಂತರ ಮನೋಜಕುಮಾರ
ಗಡಬಳ್ಳಿ ಇಂಡಿಯ ಸಮೀಪದ ಹಳ್ಳ ನೀರನ್ನು
ವೀಕ್ಷಿಸುತ್ತಿರುವದು
ತಾಲೂಕಿನ ಇಂಗಳಗಿ ಹತ್ತಿರದ ಹಳ್ಳದಲ್ಲಿ
ಹರಿಯುತ್ತಿರುವ ನೀರು
ತಾಲೂಕಿನಲ್ಲಿ ಹರಿಯುವ ಕೃಷ್ಣಾ ಕಾಲುವೆ ನೀರು
ಭುಯ್ಯಾರ ಹತ್ತಿರ ಭೀಮಾ ನದಿ
ಸೇರುತ್ತಿರುವದು.