ನೊಂದವರ ವಿಮೋಚಕ ಬಾಬಾಸಾಹೇಬರ ಕನಸುಗಳು
ಇಂಡಿ : ಬಾಬಾಸಾಹೇಬರು ಮಹಾಪರಿನಿರ್ವಾಣ ಹೊಂದಿ ಇಂದಿಗೆ ೬೮ ವರ್ಷಗಳು ಸಂದವು. ಆದರೂ ಅವರು ಶೋಷಿತರ ಎಲ್ಲ ಮನೆಮನಗಳಲ್ಲಿ ಬೆಳೆಯುವುದರ ಜೊತೆಗೆ ಜಗತ್ತಿನ ಮುನ್ನಣೆಗೆ ಒಳಗಾಗುತ್ತಿದ್ದಾರೆ.
ಇಂದಿಗೂ ಶೋಷಿತ ಸಮುದಾಯಗಳು ತಮ್ಮ ವಿಮೋಚನೆಯ ಹೊಸ ಮಾದರಿಗಳನ್ನು ಬಾಬಾ ಸಾಹೇಬರಲ್ಲಿ ಕಂಡುಕೊಳ್ಳುತ್ತಿದ್ದಾರೆ. ಅವರು ಜಗತ್ತಿನ ನೊಂದವರ ವಿಮೋಚಕರಾಗುತ್ತಿದ್ದಾರೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.
ಅವರು ಪಟ್ಟಣದ ಮಿನಿ ವಿದಾನಸೌಧದಲ್ಲಿ ನಡೆದ ಅಂಬೇಡಕರರ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂದಿಗೂ ಈ ದಲಿತ ಸಮುದಾಯಕ್ಕೆ ಬಿಡುಗಡೆ ದಾರಿಯಾಗಿ ಕಾಣುವದು ಬಾಬಾ ಸಾಹೇಬರ ತತ್ವ ಸಿದ್ದಾಂತಗಳು ಮಾತ್ರ, ಆ ದಿಕ್ಕಿನಲ್ಲಿ ಮುನ್ನಡೆದು ಬಾಬಾಸಾಹೇಬರ ಕನಸುಗಳನ್ನು ಬೆಂಬತ್ತಿದರೆ ಅಲ್ಲಿ ಎಲ್ಲ ಶೋಷಿತರಿಗೆ ಬಿಡುಗಡೆಯ ದಾರಿ ಕಾಣ ಸುತ್ತದೆ ಮತ್ತು ಅದೇ ಬಾಬಾಸಾಹೇಬರಿಗೆ ಕೊಡುವ ಶ್ರೇಷ್ಟ ಗೌರವ ಕೂಡ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ ಬಿ.ಎಸ್.ಕಡಕಬಾವಿ, ಧನಪಾಲಶೆಟ್ಟಿ ದೇವೂರ, ಎಸ್.ಆರ್.ಮುಜಗೊಂಡ, ಎಸ್.ಆರ್.ಮೆಂಡೆಗಾರ , ಟಿ.ಎಸ್.ಅಲಗೂರ, ಪ್ರಕಾಶ ಲಮಾಣ , ಗ್ಯಾರಂಟಿ ಸಮಿತಿ ತಾಲೂಕಾ ಅಧ್ಯಕ್ಷ ಪ್ರಶಾಂತ ಕಾಳೆ, ವಿನಾಯಕ ಗುಣಸಾಗರ, ಶಿವಾನಂದ ಮೂರಮನ, ಬಾಬು ಗುಡುಮಿ, ಭುವನೇಶ್ವರಿ ಗುನ್ನಾಪುರ, ಉಮಾ ಕಟ್ಟಿಮನಿ, ಎಸ್.ಎಂ.ಒಡೆಯರ, ದಾನಮ್ಮಾ ಕುಂಬಾರ, ಸುವರ್ಣಾ ಹಾವಿನಾಳ ಮತ್ತಿತರಿದ್ದರು.