ಪೌರಾಣಿಕ ನಾಟಕಗಳು ಸಂಸ್ಕಾರ ನೀಡುವ ತಾಣಗಳು : ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ
ಇಂಡಿ: ಪೌರಾಣಿಕ ನಾಟಕಗಳು ಮನುಷ್ಯನಿಗೆ ಸಂಸ್ಕಾರ ನೀಡುವ, ಸಮಾಜದ ಓರೆ ಕೊರೆ ತಿದ್ದುವ ಪ್ರಮುಖ ಮಾದ್ಯಮ ವಾಗಿದೆ ಎಂದು ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ್ ಹೇಳಿದರು.
ತಾಲೂಕಿನ ನಿಂಬಾಳ ಬಿ ಕೆ ಗ್ರಾಮದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ 536ನೆಯ ಜಯಂತಿಯ ಅಂಗವಾಗಿ ಶ್ರೀ ಬೀರಲಿಂಗೇಶ್ವರ ಮಹಾತ್ಮೆ ಯಂಬ ಸುಂದರ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತಾನಾಡಿದರು.
ಇಂದಿನ ಆದುನಿಕ ಯುಗದಲ್ಲಿ ಜಾನಪದ, ಹಾಗೂ ಪೌರಾಣಿಕ ನಾಟಕಗಳು ನಶಿಸುತ್ತಿರುವ ಸಂದರ್ಭದಲ್ಲಿ, ನಿಂಬಾಳ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಮಹಾತ್ಮೆ ಯಂಬ ಪೌರಾಣಿಕ ನಾಟಕದ ಪ್ರದರ್ಶನ ನಡೆಯುತ್ತಿದ್ದು, ಸಂತಸದ ಮತ್ತು ಹೆಮ್ಮೆಯ ಪಡುವ ವಿಚಾರ. ನಾಟಕಗಳು ಪ್ರತಿಯೊಬ್ಬರಿಗೂ ಉತ್ತಮ ಸಂಸ್ಕಾರವನ್ನು ಕಲಿಸುವ ಮಾಧ್ಯಮವಾಗಿ ಸಮಾಜದಲ್ಲಿ ಸದ್ದು ಗದ್ದಲು ವಿಲ್ಲದೆ ಕಾರ್ಯಮಾಡುತ್ತಿರುವುದು ಶ್ಲಾಘನೀಯ. ಶಿಷ್ಯ ಮಹಿಮಾಂತಕ ಶ್ರೀ ಮಾಳಿಂಗರಾಯ ಹಾಗೂ ಗುರು ಶ್ರೀ ಬೀರಲಿಂಗೇಶ್ವರ ನಡುವೆ ನಡೆಯುವ ಸಂಭಾಷಣೆ ಒಬ್ಬ ಆದರ್ಶ ಗುರು ಶಿಷ್ಯರ ಸಂಬಂಧಗಳ ಬಗ್ಗೆ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ, ಇಂತಹ ಭಕ್ತಿ ಪ್ರಧಾನ ನಾಟಕಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾತನಾಡಿದರು. ಸಾನಿಧ್ಯವನ್ನು ಗದ್ದುಗೆ ಪೂಜಾರಿ ಮಲಕಪ್ಪ ಬಿರಾದಾರ, ಮುಖ್ಯ ಅತಿಥಿಯಾಗಿ ಗ್ರಾಂ.ಪಂ ಅಧ್ಯಕ್ಷ ಲಕ್ಷ್ಮಿಬಾಯಿ ನಾಯಕ್ಕೋಡಿ, ಉಪಾಧ್ಯಕ್ಷ ಶಿವಾ ಟೆಂಗಳೆ, ಮುಖಂಡ ಸಿದ್ದಣಗೌಡ ಪಾಟೀಲ, ಸೂರ್ಯಕಾಂತ ಹಿರೇಕುರಬರ, ಶ್ರೀಮಂತ ಹಿರೇಕುರಬರ, ಶಿವಾನಂದ ಬಿರಾದಾರ, ಅರವಿಂದ್ ಗಿಡಗಂಟಿ, ಅಶೋಕ ಮರಡಿ, ಗಜಾನನ ಪುಟಾಣಿ, ಬಾಬು ಘಾಟಗೆ, ಮುರಳಿ ಘಾಟಗೆ, ಶಿವಪ್ಪ ಮೆಂಬರ್, ವ್ಹಿ ಜಿ ಬಿರಾದಾರ, ನಾನಾ ಗಿಡಗಂಟಿ, ಬಸು ವಡ್ಡರ್, ಶಿವಪ್ಪ ವಂದಾಲ, ಶರಣಪ್ಪ ವಡ್ಡರ, ಬಸಲಿಂಗಪ್ಪ ಉಪಾಸೆ ಹಾಗೂ ಮುಂತಾದವರು ಉಪಸ್ಥಿತರಿದ್ದರು ಗೌಡಪ್ಪ ಬಿರಾದಾರ ನಿರೂಪಿಸಿದರು, ಮಹಿಬೂಬ ಗಿರಗಾಂವ ವಂದಿಸಿದರು.