ಬೀದಿ ನಾಟಕಗಳ ಭೀಷ್ಮ ಸೋಮಶೇಖರ ಚಾಂದಕವಠೆ
ಇನ್ನಿಲ್ಲ..!
ಇಂಡಿ: ತಾಲ್ಲೂಕಿನ ಬೋಳೇಗಾಂವ ಗ್ರಾಮದ ಬೀದಿ
ನಾಟಕಗಳ ಭೀಷ್ಮ ಸೋಮಶೇಖರ ಚಾಂದಕವಠೆ
ಭಾನುವಾರ ಸಾಯಂಕಾಲ ನಿಧನ ಹೊಂದಿದರು. ಅವರ
ಅಂತ್ಯಕ್ರಿಯೆ ಸೋಮವಾರರಂದು ಬೆಳಿಗ್ಗೆ 11 ಗಂಟೆಗೆ
ಅವರ ಸ್ವಗ್ರಾಮದ ತೋಟದಲ್ಲಿ ನೆರವೇರಿತು. ಎಂದು
ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ
ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ. ಸೋಮಶೇಖರ ಚಾಂದಕವಠೆ 3 ವರ್ಷದವರಿದ್ದಾಗ ಬಣ್ಣ ಹಚ್ಚಿ ತಮ್ಮ 78 ನೇ ವಯಸ್ಸಿನವರೆಗೆ ಸುಮಾರು 250 ಬೀದಿ ನಾಟಕಗಳನ್ನು ಆಡಿದ್ದಲ್ಲದೇ ಚಲನಚಿತ್ರ, ದಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಮಾಜದ ಒಳಿತಿಗಾಗಿ
ವರದಕ್ಷಿಣೆ ವಿರುದ್ದ, ಜಾತಿ ವಿರುದ್ದ, ಬಾಲ್ಯ ವಿವಾಹ,
ಸಮಾಜದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿ – ಸುವದಕ್ಕಾಗಿ ಜನ ಜಾಗೃತಿ ಮೂಡಿಸಲು ತಮ್ಮ
ಇಡೀ ಜೀವನವನ್ನೇ ಮುಡಿಪಾಗಿಟ್ಟು ಬೀದಿ ನಾಟಕಗಳ
ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಅವರಿಗೆ ಇಲ್ಲಿಯವರೆಗೆ ಜಿಲ್ಲಾ ಪ್ರಶಸ್ತಿ, ತಾಲ್ಲೂಕು ಪ್ರಶಸ್ತಿ ಬಿಟ್ಟರೆ ಇನ್ನಾವುದೇ ಪ್ರಶಸ್ತಿಗಳು ಸಿಕ್ಕಿಲ್ಲ. ಎಲೆಮರೆಯ
ಕಾಯಿಯಂತೆ ತಮ್ಮ ಜೀವನ ಸಮಾಜಕ್ಕಾಗಿ ಸವೆಸಿರುವದು ಶ್ಲಾಘನೀಯ ಸಂಗತಿ. ಸೋಮಶೇಖರ ಚಾಂದಕವಠೆ ಅವರ ಜೀವನದ ಬಗ್ಗೆ ಸಾಹಿತಿ ಸಿ.ಎಂ. ಬಂಡಗರ ಅವರು ಒಂದು ಪುಸ್ತಕ ಹೊರತಂದಿದ್ದು, ಕಳೆದ 2 ವರ್ಷಗಳ ಹಿಂದೆ ಬಿಡುಗಡೆಯಾಗಿದೆ. ಡಾ. ರಮೇಶ ಕತ್ತಿ ಅವರು ಇತ್ತೀಚೆಗೆ ಸೋಮಶೇಖರ ಚಾಂದಕವಠೆ ಅವರ ಬಗ್ಗೆ ಒಂದು ಪುಸಕ್ತ ಬರೆದಿದ್ದು, ಅದನ್ನು ಮುಂದಿನ ವಾರ ಬಿಡುಗಡೆಗೊಳ್ಳಲಿದ್ದು, ಅದಕ್ಕಾಗಿ
ಸೋಮಶೇಖರ ಚಾಂದಕವಠೆ ಅವರಿಗೆ ಆವ್ಹಾನ ನೀಡಿ
ಹೋಗಿದ್ದರು. ಆದರೆ ಅವರು ನಿಧನ ಹೊಂದಿದ್ದು, ಅವರ
ಅಭಿಮಾನಿಗಳಲ್ಲಿ ಆಘಾತ ತಂದಿದೆ.
ಇಂಡಿ: ಮೃತ ಸೋಮಶೇಖರ ಚಾಂದಕವಠೆ ಭಾವಚಿತ್ರ.