ಪಠ್ಯ ಆಧಾರಿತ ನಾಟಕ ಪ್ರದರ್ಶನ ಉದ್ಘಾಟನೆ..
ಇಂಡಿ : ಪಟ್ಟಣದ ಹೊರವಲಯದಲ್ಲಿರುವ ಅಮರ್ ಮಂಗಲ ಕಾರ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕಲ್ಪುರ ಸಂಸ್ಕøತಿಕ ಕಲಾಸಂಘ
ಕಲ್ಲೂರು ಸಹಯೋಗದಲ್ಲಿ ಪಿಯುಸಿ ಪ್ರಥಮ
ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಕನ್ನಡ
ವಿಷಯದಲ್ಲಿ ಬರುವ ಜ್ಞಾನಪೀಠ ಪ್ರಶಸ್ತಿ
ವಿಜೇತರಾದ ಡಾಕ್ಟರ್ ಚಂದ್ರಶೇಖರ್ ಕಂಬಾರರ
ಬೋಳೇಶಂಕರ ನಾಟಕ ಹಾಗೂ ರಾಷ್ಟ್ರಕವಿ
ಕುವೆಂಪು ಅವರ ಮಗನಾದ ಪೂರ್ಣಚಂದ್ರ
ತೇಜಸ್ವಿಯವರು ಬರೆದಿರುವ ದೀರ್ಘ ಗದ್ಯ
ಕೃಷ್ಣೆಗೌಡನ ಆನೆ ಎಂಬ ಪಠ್ಯಾಧರಿತ ನಾಟಕವನ್ನು
ಪ್ರದರ್ಶನ ಇಂಡಿ ತಾಲೂಕಿನ ಪದವಿಪೂರ್ವ
ಕಾಲೇಜುಗಳ ಕನ್ನಡ ಉಪನ್ಯಾಸಕ ಉಪನ್ಯಾಸಕಿಯರು ಹಾಗೂ ಶ್ರೀಧರ ಗೌಡ ಬಿರಾದರ, ಎಸ್.ಎಸ್. ಈರಣ್ಣಕೇರಿ, ವಿಜಯಕುಮಾರ ರಾಠೋಡ, ಮಲ್ಲಿಕಾರ್ಜುನ ಕಳ್ಳಿಮನಿ, ಎಮ್.ಕೆ.ಪಾಟಿಲ,
ಉಪನ್ಯಾಸಕಿಯರದ ಶಖೀನಾ ಪಟೇಲ್, ಎಸ್.ಎಸ್
ಹೂಗಾರ , ಶ್ವೇತಾ ಮೇಡಮ್ ಎಲ್ಲರೂ ತಮಟೆ
ಬಾರಿಸುವುದರ ಮೂಲಕ ಉದ್ಘಾಟಿಸಿದರು.
ಪ್ರಸ್ತಾವಿಕವಾಗಿ ನಾಟಕದ ವಸ್ತು ವಿಷಯ ಕುರಿತು
ಉಪನ್ಯಾಸಕ ಸದಾನಂದ ಎಸ್ ಈರನಕೇರಿ ಯವರು
ಮಾತನಾಡುತ್ತಾ ಇಂದಿನ ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ
ಪಠ್ಯ ಆಧಾರಿತ ನಾಟಕಗಳು ಅತ್ಯಂತ ಪರಿಣಾಮ
ಬೀರುವುದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲಿಕ್ಕೆ ಸಾಧ್ಯ ಹಾಗೂ ಚಿತ್ರಗಳನ್ನು ನೋಡಿದಾಗ ಅಚ್ಚಳಿಯದೆ ನಮ್ಮ ಸ್ಮೃತಿಪಟಲದಲ್ಲಿ ಉಳಿಯುತ್ತವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕಿ ಪಟೇಲ್
ಮಾತನಾಡಿ ನಾಟಕ ಪ್ರದರ್ಶನ ಚೆನ್ನಾಗಿ ಮಾಡಿದರು
ಮಕ್ಕಳು ನಾಟಕ ವೀಕ್ಷಣೆ ಮಾಡುವುದರ ಮೂಲಕ ಅತ್ಯಂತ ಖುಷಿಯಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಪಡೆದುಕೊಳ್ಳಲಿಕ್ಕೆ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂಡಿ ನಗರದ ಎಲ್ಲಾ
ಪದವಿಪೂರ್ವ ಕಾಲೇಜಿನ ಉಪನ್ಯಾಸಕರು
ಸುಮಾರು 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇಂಡಿ ಪಟ್ಟಣದ ಹೊರವಲಯದಲ್ಲಿರುವ ಅಮರ್
ಮಂಗಲ ಕಾರ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ
ಇಲಾಖೆ ಹಾಗೂ ಕಲ್ಪುರ ಸಂಸ್ಕøತಿಕ ಕಲಾಸಂಘ
ಕಲ್ಲೂರು ಸಹಯೋಗದಲ್ಲಿ ಪಠ್ಯಾಧರಿತ
ನಾಟಕವನ್ನು ಪ್ರದರ್ಶನ ನಡೆಯಿತು.