ರಾಯಚೂರು : ಜಿಲ್ಲೆಯಲ್ಲೆಗೆ ಬರುವ ಜಿಲ್ಲಾಧಿಕಾರಿಗಳು ಯಾವುದೇ ಅಧಿಕಾರಿಗಳು ಬಿಜೆಪಿ ಶಾಸಕರು ಹೇಳಿದಂತೆ ಕೇಳಬೇಕು ಇಲ್ಲವಾದಲ್ಲಿ ಅವರಿಗೆ ವರ್ಗಾವಣೆಯ ಮಾಡಿಸಲಾಗುತ್ತದೆ ಎಂದು ಕಾಂಗ್ರೇಸ್ ಮುಖಂಡ ರವಿ ಭೊಸರಾಜ್ ಡಾ.ಶಿವರಾಜ್ ಪಾಟೀಲ್ ವಿರುದ್ಧ ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿಜೆಪಿ ಸರ್ಕಾರದ ಶಾಸಕರಾದ ಡಾ.ಶಿವರಾಜ ಪಾಟೀಲ್ ರಾಜ್ಯದ ನಂಬರ್ ಒನ್ ಭ್ರಷ್ಟ ಶಾಸಕರಾಗಿದ್ದಾರೆ.
ಶಾಸಕರು ಶೇ.೪೦ ರಿಂದ ೫೦ ರಷ್ಟು ಕಮಿಷನ್ ಒತ್ತಡಕ್ಕೆ ಅಧಿಕಾರಿಗಳು ತಮ್ಮ ಸ್ಥಾನಗಳನ್ನೇ ತ್ಯಜಿಸುವ ದುರದೃಷ್ಟಕರ ಆಡಳಿತ ವ್ಯವಸ್ಥೆ ಈ ಕ್ಷೇತ್ರದಲ್ಲಿದೆ. ಅನುದಾನ ಇರುವ ಮತ್ತು ಲಾಭಾದಾಯಕ ಎಲ್ಲಾ ಕಾಮಗಾರಿಗಳನ್ನು ಶಾಸಕರ ಅಣ್ಣ-ತಮ್ಮಂದಿರು ನೋಡುತ್ತಾರೆ. ಶಾಸಕರನ್ನು ಕೇಳದೇ ಯಾವುದೇ ಕೆಲಸ ಯಾರು ಮಾಡುವಂತಿಲ್ಲ. ಗುತ್ತಿಗೆಯನ್ನು ಶಾಸಕರ ಸೂಚನೆಯಂತೆ ನೀಡಲಾಗುತ್ತದೆ.
ಡಾ. ಶಿವರಾಜ ಪಾಟೀಲ್ ಅವರ ಒತ್ತಡದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತ ಮುನಿಸ್ವಾಮಿ ಅವರು ಸ್ವಯಂ ನಿವೃತ್ತಿ ಪಡೆಯುತ್ತಿರುವುದು ಎಲ್ಲಾರಿಗೂ ಗೊತ್ತಿರುವ ಸಂಗತಿ. ಈ ವಿಷಯವನ್ನು ಮುನಿಸ್ವಾಮಿ ಅವರು ಹೇಳದಿದ್ದರೂ, ಅವರ ಸ್ವಯಂ ನಿವೃತ್ತಿ ಹಿಂದೆ ಶಾಸಕರ ಒತ್ತಡ ಇರುವುದು ಅಲ್ಲಗಳೆಯಲಾಗದು. ಹಾಗಾಗಿ ರಾಜ್ಯದ 224 ಶಾಸಕರಲ್ಲಿ ಶಿವರಾಜ ಪಾಟೀಲ್ ಅವರು ಭ್ರಷ್ಟಾಚಾರದಲ್ಲಿ ನಂಬರ್ ಒನ್ ಶಾಸಕರಾಗಿದ್ದಾರೆ. ರಿಮ್ಸ್ ಆಸ್ಪತ್ರೆ ಕಟ್ಟಡ, ಸಣ್ಣ ನೀರಾವರಿ ಇಲಾಖೆಯ ಚೆಕ್ ಡ್ಯಾಂ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಗುತ್ತಿಗೆಯನ್ನು ಇವರೇ ನಿರ್ವಹಿಸಿ, ಲೂಟಿ ಮಾಡಲಾಗಿದೆ. ಸ್ವತಃ ಬಿಜೆಪಿ ಗುತ್ತೇದಾರರೇ ಶಾಸಕ ಡಾ.ಶಿವರಾಜ ಪಾಟೀಲ್ ಅವರು ತಮ್ಮ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆಂದು ದೂರು ನೀಡಿದ್ದಾರೆ.
ಇ-ಪ್ರಕ್ಯೂರಮೆಂಟ್ ಟೆಂಡರ್‌ಗಳಲ್ಲೂ ಶಾಸಕರು ಹೇಳುವವರಿಗೆ ಟೆಂಡರ್ ನೀಡುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಭಿವೃದ್ಧಿ ಕೈಗೊಳ್ಳದಿರುವುದರಿಂದ ನಮ್ಮನ್ನು ತೆಲಂಗಾಣಕ್ಕೆ ಸೇರಿಸುವಂತೆ ಡಾ.ಶಿವರಾಜ ಪಾಟೀಲ್ ಅವರ ಹೇಳಿಕೆಯ ವಿರುದ್ಧ ನಾವು ತಿರುಗಿಬಿದ್ದ ನಂತರ ಕ್ಷಮಾಪಣೆ ಕೇಳುವ ಮಟ್ಟಕ್ಕೆ ಇಳಿದಿದ್ದರು. ಈ ರೀತಿ ತಮ್ಮ ಅನುಕೂಲಕ್ಕೆ ತಕ್ಕಂತೆ ಆಡಳಿತ ನಿಯಂತ್ರಿಸಲಾಗುತ್ತಿದೆ ಎಂದು ದೂರಿದರು.