ಇಂಡಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಮೇರು ನಟ ಸಾಹಸಸಿಂಹ, ಕಲಿಯುಗದ ಕರ್ಣ ಎಂದು ಖ್ಯಾತರಾಗಿದ್ದ ಡಾ.ವಿಷ್ಣುವರ್ಧನ್ ಅವರು ಸಹ ಪ್ರಮುಖ ಕಾರಣರಾಗಿದ್ದಾರೆಂದು ವಿ ಎಸ್ ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶೀವು ಬಡಿಗೇರ ಹೇಳಿದರು.
ನಗರದ ವಿಜಯಪುರ ರಸ್ತೆಯ ಮಾರ್ಗದ ಬ್ಯಾಂಕ್ ಆಫ್ ಇಂಡಿಯಾ ಎದುರು ಇರುವ ಡಾ. ವಿಷ್ಣುವರ್ಧನ್ ವೃತ್ ದಲ್ಲಿ ಡಾ. ವಿಷ್ಣುವರ್ಧನ್ 15 ನೇ ಪುಣ್ಯ ಸ್ಮರಣೊತ್ಸವ ನಿಮತ್ಯ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ್ದರು.
ನಟನೆಯೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡುಗುವ ಮೂಲಕ ಡಾ. ವಿಷ್ಣುವರ್ಧನ್ ಸಮಾಜಕ್ಕೆ ಮಾದರಿ ಹಾಗೂ ಆದರ್ಶವಾಗಿದ್ದಾರೆ. ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ, ಕಲಾದೈವ, ಮೈಸೂರು ರತ್ನ ಎಂಬ ಬಿರುದುಗಳಿಂದ ಜನಪ್ರಿಯತೆ ಪಡೆದವರು ಡಾ.ವಿಷ್ಣುವರ್ಧನ್. ‘ದಿ ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ’ ಅಂತಲೇ ಖ್ಯಾತಿ ಪಡೆದಿದ್ದ ಡಾ.ವಿಷ್ಣುವರ್ಧನ್ ಪ್ರೀತಿಯ ಅಭಿಮಾನಿಗಳಿಂದ ‘ಹೃದಯವಂತ’ ಅಂತಲೇ ಕರೆಯಿಸಿಕೊಂಡವರು ಎಂದು ಹೇಳಿದರು. ಇಂದಿನ ಕಲಾವಿದರು ಹಾಗೂ ಸಮಾಜದಲ್ಲಿರುವ ತರುಣ ಯುವಕರು ಡಾ.ವಿಷ್ಣುವರ್ಧನ್ ಅವರ ಆದರ್ಶ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇನ್ನೂ ಇದೆ ಸಂದರ್ಭದಲ್ಲಿ ಮೈಬೂಬ ಬೇವನೂರ ಮಾತನಾಡಿದರೆ, ತಾ.ಪಂ ಮಾಜಿ ಸದಸ್ಯ ರಾಠೋಡ ಡಾ. ವಿಷ್ಣುವರ್ಧನ್ ಅವರ ಚಲನಚಿತ್ರಗಳು ಹಾಡಿ ನಾಡು, ನುಡಿ ದೇಶದ ಬಗ್ಗೆ ಅವರಿಗೆ ಇರುವ ಕಾಳಜಿ ಅಭಿಮಾನ ವ್ಯಕ್ತಪಡಿಸಿದರು .
ಇನ್ನೂ ಈ ಸಂದರ್ಭದಲ್ಲಿ ಎಮ್ ಪಿ ವರ್ಧನ್, ದಯಾನಂದ ಹೊಸಮನಿ, ಶಿವಕುಮಾರ್ ಬಿಸನಾಳ, ಪ್ರದೀಪ ಪವಾರ್, ರಮೇಶ್ ಚವ್ಹಾಣ, ಬಳವಂತಿ ವಕೀಲರು,ಅರವಿಂದ ಪವಾರ್,ಅರ್ಪನ್ನ ರಾಠೋಡ, ರಮೇಶ್ ಮಠಪತಿ,ಸುನೀಲ ಸಾಳಂಕೆ, ವಿಜಯಕುಮಾರ್ ಪೋಳ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.