ಹರನಾಳ | ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ
ರಾಷ್ಟ್ರದ ಏಳಿಗೆಗಾಗಿ ಎಲ್ಲವೂ ತ್ಯಾಗ ಮಾಡಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ : ತಳವಾರ ಸಮಾಜದ ಯುವ ಮುಖಂಡ ಪ್ರಭು.
ದೇವರ ಹಿಪ್ಪರಗಿ : ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 134 ನೇ ಜಯಂತಿ ಆಚರಣೆಯನ್ನು ದೇವರ ಹಿಪ್ಪರಗಿ ತಾಲ್ಲೂಕಿನ ಹರನಾಳ ಗ್ರಾಮದಲ್ಲಿ ಆಚರಿಸಲಾಯಿತು.
ಸೋಮವಾರ ಹರನಾಳ ಗ್ರಾಮದ ತಳವಾರ ವೃತ್ ದ ಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವಿನ್ನಟ್ಟು ಅಖಿಲ ಕರ್ನಾಟಕ ನಾಯಕ ತಳವಾರ್ ಜನಾಂಗದ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಪುಷ್ಪರ್ಚಾಣೆ ಮಾಡಿ ಜಯಂತಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ಯುವ ಮುಖಂಡ ಪ್ರಭು ಮಾತನಾಡಿ, ಇಂದು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಯ ಸ್ಪೂರ್ತಿದಾಯಕ ಪ್ರಯಾಣವನ್ನು ಆಧರಿಸಿದೆ. ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ ನಾಟೀಕಾರ, ಪರಶುರಾಮ ನಾಟೀಕಾರ, ಕೃಷ್ಣಪ್ಪ ನಾಟೀಕಾರ, ಯುವ ಮುಖಂಡರಾದ ಪ್ರಭು ಎಮ್ ನಾಟೀಕಾರ , ಮಹೇಶ ನಾಟೀಕಾರ, ಬಸವರಾಜ ನಾಟೀಕಾರ
ದಲಿತ ಸಂಘಟನೆಗಳ ಪ್ರಮುಖರಾದ ರಮೇಶ ಸಂದಿಮನಿ, ಅನಿಲ ಸಿಂಧೆ, ಅಶೋಕ ಕಾಂಬಳೆ, ಸಿದ್ದಲಿಂಗ ಸಂದಿಮನಿ ಇದ್ದರು.