ಡಾ. ಬಿ. ಆರ್. ಅಂಬೇಡ್ಕರ್ ಚಿಂತನೆಗಳಿಂದಲೇ ಯುವ ಸಮುದಾಯಕ್ಕೆ ಸ್ಫೂರ್ತಿ
ಇಂಡಿ: ಡಿಸೆಂಬರ್ ೬ ರಂದು ಆಚರಿಸಲಾಗುವ ಮಹಾಪರಿ ನಿರ್ವಾಣ ದಿವಸ್ ಭಾರತೀಯ ಸಂವಿಧಾನದ ಪಿತಾಮತ ಎಂದು ಪ್ರೀತಿಯಿಂದ ಸ್ಮರಿಸುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯ ತಿಥಿಯನ್ನು ಸೂಚಿಸುತ್ತದೆ ಎಂದು ಸಿ.ವಿ.ರಾಮನ್ ವಿಜ್ಞಾನ ಪಿಯು ಕಾಲೇಜಿನ ಅಧ್ಯಕ್ಷ ಶಿವಾನಂದ ಕಾಮಗೊಂಡ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಸಿ.ವಿ.ರಾಮನ್ ಕಾಲೇಜಿನಲ್ಲಿ ಮಹಾಪರಿನಿರ್ವಾಣ ದಿವಸ್ ಪ್ರಯುಕ್ತ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ ಕುರಿತು ಭಾಷಣ ಸ್ಪರ್ಧೆಯ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಬಿ.ಆರ್ ಅಂಬೇಡ್ಕರ್ ಅವರು ಅಸಮಾನತೆ ವಿರುದ್ಧ ಗಟ್ಟಿ ಧ್ವನಿಯೆತ್ತಿದ ಮಾನವತಾವಾದಿ. ಸಮಾಜ ಸುಧಾಕರಾಗಿ ಈ ಸಮಾಜಕ್ಕೆ ನೀಡಿದ ಕೊಡುಗೆಗಳು ಅಗಾಧವಾದದ್ದು ಎಂದರು.
ಭಾರತ ಕಂಡ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್. ಯುವ ಸಮುದಾಯಕ್ಕೆ ತನ್ನ ಚಿಂತನೆಗಳಿAದಲೇ ಸ್ಫೂರ್ತಿ ಹಾಗೂ ಆದರ್ಶ ವ್ಯಕ್ತಿ ಎನಿಸಿಕೊಂಡಿದ್ದಾರೆ. ಸಮಾಜ ಸುಧಾರಕರಾಗಿದ್ದು, ದಲಿತ ಬೌದ್ಧ ಚಳುವಳಿಯನ್ನು ಮುನ್ನಡೆಸುವ ಮೂಲಕ ಪ್ರೇರಣೆಯಾದ ವ್ಯಕ್ತಿಯಾಗಿದ್ದಾರೆ ಎಂದರು.
ದ್ವಿತೀಯ ವರ್ಷದ ವಿದ್ಯಾರ್ಥಿ ದರ್ಶನ್ ಶಿವಶರಣ, ಪ್ರಥಮ ವರ್ಷದ ವಿದ್ಯಾರ್ಥಿನಿ ಪ್ರತಿಭಾ ಮಾದರ್ ಮಾತನಾಡಿ, ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ದಲಿತ ಕುಟುಂದಲ್ಲಿ ಜನಿಸಿದ್ದರಿಂದ ಅಸ್ಪೃಶ್ಯತೆ ನೋವು ಮಾತ್ರ ಇವರನ್ನು ಬಿಡಲಿಲ್ಲ. ಹೀಗಾಗಿ ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳು, ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ ಎಂದು ಮಾರ್ಮಿಕವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮಹಾವೀರ ವರ್ಧಮಾನ, ಶೈಲೇಶ ಬೀಳಗಿ, ಸನ್ಮತಿ ಹಳ್ಳಿ, ಪ್ರಸನ್ನಕುಮಾರ ನಾಡಗೌಡ, ಶೋಭಾ ನಾರಾಯಣಕರ್, ಶೈಲಜಾ ಜಾಗೀರದಾರ ಸೇರಿದಂತೆ ವಿದ್ಯಾರ್ಥಿಗಳಾದ ಸಾರ್ವಭೌಮ ಸಾಳುಂಕೆ, ಶಿವಪುತ್ರ ನಿಂಬಾಳಕರ್, ಸುದೀಪ ದೇಸಾಯಿ, ಆಕಾಶ ಕಲ್ಯಾಣ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಶುಕ್ರವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಸಿ.ವಿ.ರಾಮನ್ ಮಹಾವಿದ್ಯಾಲಯಲ್ಲಿ ಮಹಾಪರಿನಿರ್ವಾಣ ದಿವಸ್ ಆಚರಿಸಲಾಯಿತು.