ಇಂಡಿ : ಡಾ.ಬಿರ್ ಅಂಬೇಡ್ಕರ್ ಒಂದು ಸಮುದಾಯಕ್ಕೆ ಸಿಮಿತ ಅಥವಾ ಸಂಬಂಧಿಸಿದ ವ್ಯಕ್ತಿ ಅಲ್ಲಾ. ಅವರು ಜಗತ್ತಿನ ವಿಶ್ವರತ್ನ. ವಿಶೇಷವಾಗಿ ನಮ್ಮ ದೇಶದ ಆಡಳಿತದ ಬುನಾದಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅನೀಲಗೌಡ ಅವಜಿ ಮಾತಾನಾಡಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿಕೆ ಮತ್ತು ನಾದ ಕೆಡಿ ಗ್ರಾಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 131ನೇ ಜನ್ಮ ದಿನೋತ್ಸವ ಅಂಗವಾಗಿ ಗ್ರಾಮಸ್ಥರು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಗ್ರಾಮದ ಬಸ್ ತಂಗುದಾಣದ ಸಮೀಪವಿರುವ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಗ್ರಾಮದ ಯುವ ಮುಖಂಡರು ಮತ್ತು ಗ್ರಾಮ ಪಂಚಾಯತ ಮಾಜಿ ಸದಸ್ಯರಾದ ಅನೀಲಗೌಡ ಅಳ್ಳಗಿ ಹಾಗೂ ತೀರ್ಥಪ್ಪ ಕೊಳ್ಳೂರ ಇವರು ಭಾವಚಿತ್ರಕ್ಕ ಗೌರವಪೂವ೯ಕವಾಗಿ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಶಿವಾನಂದ ಹರಿಜನ ಮಾತಾನಾಡಿದ ಅವರು, ಇವತ್ತು ರಾಜ್ಯದಲ್ಲಿ ಯಾವ ರೀತಿಯ ವಿಷಮ ಪರಿಸ್ಥಿತಿ ಉಂಟಾಗುತ್ತಿದೆ ಅದು ನಮ್ಮ ನಿಮ್ಮಲ್ಲರ ಗಮನಕ್ಕೂ ಇದೆ. ಜಾತಿ ಜಾತಿಯ ಮಧ್ಯ, ಧರ್ಮ ಧರ್ಮದ ಮಧ್ಯ ಕಲಹದ ಕಂದಕಗಳನ್ನು ಸ್ವಾರ್ಥ ರಾಜಕಾರಣಕ್ಕಾಗಿ ಇಡೀ ಮಾನವ ಕುಲಕ್ಕೆ ದಕ್ಕೆ ತರುತ್ತಿದ್ದಾರೆ. ಅಂತಹ ಯಾವ ವಿಚಾರಗಳಿಗೂ ತಲೆ ಕೊಡಬಾರದು ನಾವು ಶಾಂತಿ ಸೌಹಾರ್ದತೆ ಸಂಕೇತ ಎಂದು ತೋರಿಸಬೇಕು. ಜೊತೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಸಿದ್ದಾಂತಗಳು ಬರವಣಿಗೆ ಮೂಲಕ ಸಾಧಿಸಿ ತೋರಿಸಿದ್ದಾರೆ. ಆ ತತ್ವ ಸಿದ್ದಾಂತಗಳಿಗೆ ನಾವುಗಳು ಮೊರೆ ಹೊಗೋಣ ಎಂದು ಹೇಳಿದರು.
ಗ್ರಾಮ ಪಂಚಾಯತ ಸದಸ್ಯ ಪುನಿತ್ ಗೌಡ ಅವಜಿ ಇವರು ಮಾತನಾಡಿ- ಈ ವಿಶ್ವದಲ್ಲಿ ಹೆಚ್ಚು ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಪದವಿಗಳನ್ನು ಪಡೆದಿರುವ ಮಹಾನ ವ್ಯಕ್ತಿ ಅಂದರೆ ಡಾ. ಬಾಬಾಸಾಹೇಬ ಅಂಬೇಡ್ಕರ್. ಪ್ರತಿಯೊಬ್ಬರು ಪುಸ್ತಕಗಳನ್ನು ಓದುವುದಾದರೆ ಮಹಾನ ವ್ಯಕ್ತಿಗಳ ಸಾಧನೆಯ ಜೀವನ ಚರೀತ್ರೆಯನ್ನು ಸಂಪೂಣ೯ವಾಗಿ ಓದಿರಿ. ಆಗ ಬದಲಾವಣೆ ಖಚಿತವಾಗುತ್ತದೆ. ವಿದ್ಯಾಥ೯ಗಳು ಕೇವಲ ಅಂಕಗಳಿಗೋಸ್ಕರ ಓದಬೇಡಿ, ಜ್ಞಾನಾಜ೯ನೆಗಾಗಿ ಓದಿ ಬದಲಾವಣೆ ಖಚಿತ ಎಂದು ಹೇಳಿದರು.
ನಾದ ಕೆ.ಡಿ ಗ್ರಾಮದ ಪೈಗಂಬರ್ ದೇಸಾಯಿಯವರು ಮಾತನಾಡಿ -ಬಾಬಾಸಾಹೇಬರು ಹೇಳುವ ಹಾಗೆ ಪ್ರತಿಯೊಬ್ಬರು ಮೊದಲು ಶಿಕ್ಷಣ ಪಡೆಯಬೇಕು, ನಂತರ ಸಂಘಟನೆ ಮಾಡಬೇಕು ,ಆ ನಂತರ ಹೋರಾಟದ ಹಾದಿ ಹಿಡಿದರೆ ಮಾತ್ರ ಅವರ ತತ್ವ ಸಿದ್ದಾಂತವನ್ನು ನಾವೇಲ್ಲಾ ಪಾಲಿಸಿದಂತಾಗುತ್ತದೆ ಎಂದು ಹೇಳಿದರು.
ಈ ಕಾಯ೯ಕ್ರಮದಲ್ಲಿ ಸೋಮಶೇಖರ ಮ್ಯಾಕೇರಿ, ಹಣಮಂತ ಕ್ಷತ್ರಿ, ಮುತ್ತು ಕೋಳೆಕಾರ, ಬಸವರಾಜ ಮೇಲಿನಕೇರಿ, ದವಲಪ್ಪ ಗುಡಿಮನಿ, ಅನಿಲ ಗುಡಿಮನಿ, ಸಿದ್ದು ತಳವಾರ, ಪರಸುರಾಮ ಕಾಂಬಳೆ,ಲಗಸೆಪ್ಪ ಕಾಂಬಳೆ, ಕನ್ನಪ್ಪ ನಾದ, ಮಂಜುನಾಥ ಕಣಮೇಶ್ವರ, ಶೆಟ್ಟೆಪ್ಪ ಗುಡಿಮನಿ, ರಾಮಚಂದ್ರ ಕಾಂಬಳೆ, ಕುಮಾರ ಕಾಂಬಳೆ, ಹುಸನಪ್ಪ ಗುಡಿಮನಿ, ತಮಡು ಗುಡಿಮನಿ, ಅಭೀಷೇಕ, ಭಿರಪ್ಪ ಕೊಳ್ಳೂರ, ಶಿವಪ್ಪ ತಿಡಗುಂದಿ, ರವಿ ಗುಡಿಮನಿ, ಸಚೀನ ಕ್ಷತ್ರಿ, ಎಸ್.ಬಿ.ಹರಿಜನ, ಆನಂದ ಕಾಂಬಳೆ,ಇತರರು ಉಪಸ್ಥಿತರಿದ್ದರು.