ಬ್ರೇಕಿಂಗ್ : ಡಬಲ್ ಮರ್ಡರ್..! ಎಲ್ಲಿ ಗೊತ್ತಾ..?
ವಿಜಯಪುರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆ ಸೇರಿದಂತೆ ಜೋಡಿ ಕೊಲೆಯಾದ ಘಟನೆ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಜಮೀನೊಂದರಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಸೋಮನಿಂಗ ಕುಂಬಾರ್(೪೦) ಮತ್ತು ರೇಣುಕಾ ತಳವಾರ್ (೩೫)ಕೊಲೆಯಾದವರು.ಆರೋಪಿ ನಾಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.