ಇಂಡಿ: ತಾಲೂಕಿನ ಅರ್ಜುನಗಿ ಗ್ರಾಮದ ಶ್ರೀ ಗೈಬುಸಾಬರ ಜಾತ್ರಾ ಮಹೋತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಗ್ರಾಮದ ಯುವಕರಿಂದ ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಉದ್ಘಾಟನೆಯನ್ನು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ನೆರವೇಸಿದರು. ನಂತರ ಮಾತಾನಾಡಿದ ಅವರು ದಾನದಲ್ಲಿ ದಾನ ರಕ್ತದಾನ ಶ್ರೇಷ್ಠ. ಮನುಷ್ಯನ ಜೀವನ್ಮರಣದಲ್ಲಿ ರಕ್ತ ಬಹಳ ಮುಖ್ಯ ಇಂತಹ ರಕ್ತದಾನ ಶಿಬಿರವನ್ನು ಗ್ರಾಮದ ಯುವಕರು ಹಮ್ಮಿಕೊಂಡಿರುವದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಷ.ಬ್ರ. ಶ್ರೀರೇಣುಕಾಚರ್ಯರು ಮನುಷ್ಯ ಜೀವಂತವಾಗಿರುವಾಗಲೆ ದಾನ ಮಾಡುವ ಅಂಗ ಅದು ರಕ್ತದಾನ ಎಲ್ಲಾದಾನಗಳಲ್ಲಿ ರಕ್ತದಾನ ಶ್ರೇಷ್ಠ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಸಿದ್ದಪ್ಪ ಮಾದರ, ರಾಘವೇಂದ್ರ ಕುಲಕರ್ಣಿ, ಶ್ರೀ ಶೈಲಗೌಡ ಪಾಟೀಲ ಲಾಲಬಾಷಾ ಚಬನೂರ ಸಿದ್ದು ಡಂಗಾ, ಗೈಡು ಮುಲ್ಲಾ, ಶರಣಪ್ಪ ಹೂಸೂರ, ಡಾ ಪ್ರಶಾಂತ. ದೂಮಗೋಂಡ, ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗಂಗಾಧರ ತಾವರಖೇಡ ನಿರೂಪಿಸಿ ವಂದಿಸಿದರು.