ಈ ದೇವರಿಗೆ ಮಧ್ಯವೇ ತೀರ್ಥ, ಜಾತ್ರೆ ಎಂದು ಗೊತ್ತಾ..!
ಇಂಗಳಗಿ ಧರ್ಮರ ದೇವರ ಜಾತ್ರೆ..!
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ಮರುಳಸಿದ್ದೇಶ್ವರ (ಧರ್ಮರ ದೇವರ) ಜಾತ್ರಾ
ಮಹೋತ್ಸವ ಮಾರ್ಚ 11 ರ ಸೋಮವಾರ ನಡೆಯಲಿದೆ.
ಅಂದು ಬೆಳಿಗ್ಗೆ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮವಿದ್ದು, ಸಾಯಂಕಾಲ 6:00 ಘಂಟೆಗೆ
ಗಂಗೆಸೀತಾಳ ಕಾರ್ಯಕ್ರಮ ರಾತ್ರಿ 8:00 ಘಂಟೆಗೆ
ದೇವರ ನುಡಿಮುತ್ತುಗಳು (ಹೇಳಿಕೆ) ನಡೆಯುತ್ತವೆ. ತದನಂತರ ಪ್ರಸಾದ ಸೇವೆ ನಡೆಯುತ್ತದೆ.
ಮಧ್ಯವೇ ತೀರ್ಥ: ಜಾತ್ರಾ ದಿನದಂದು ಈ ದೇವರಿಗೆ ವಿಶೇಷವಾಗಿ ಮಧ್ಯವನ್ನು (ಸಾರಾಯಿ) ತೀರ್ಥವಾಗಿ ನೀಡುತ್ತಾರೆ. ರಾತ್ರಿ ಪೂಜಾ ನಂತರ ನಡೆಯುವ ಹೇಳಿಕೆ ಕಾರ್ಯಕ್ರಮದಲ್ಲಿ ಈ ತೀರ್ಥವನ್ನು ನೀಡುತ್ತಾರೆ.
ಟೆಂಗಿನಕಾಯಿ ಮೇಲೆ ಹೇಳಿಕೆ: ಪೂಜಾ ನಂತರ ಮುಂಗಾರು-ಹಿಂಗಾರು ಮಳೆಯ ಕುರಿತು ಟೆಂಗಿನಕಾಯಿ ಒಡೆಯುವ ಮೂಲಕ ಹೇಳಿಕೆ ಹೇಳಲಾಗುತ್ತದೆ. ಟೆಂಗಿನಕಾಯಿಯ ಮುಂಭಾಗದ ಭಾಗ (ಚಿತ್ತ) ಮೇಲೆ ಬಿದ್ದರೆ ಒಳ್ಳೆಯದಾಗುತ್ತದೆ. ಕೆಳಗೆ ಮುಖ ಮಾಡಿ ಬಿದ್ದರೆ ಸರಿ ಇಲ್ಲ ಅಥವಾ ಒಳ್ಳೆಯದ್ದಾಗಲ್ಲ ಎಂಬ ನಂಬಿಕೆಇದೆ.
ಮಳೆಯ ಹೇಳಿಕೆಯ ನಂತರ ಭಕ್ತರು ತಮ್ಮ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಹೇಳಿಕೆ ಕೇಳುವುದು ವಾಡಿಕೆಯಾಗಿದೆ.
ಹರಕೆ ಮುಟ್ಟಿಸುವ ಭಕ್ತರು: ಭಕ್ತರು ಹರಕೆ ಹೊತ್ತು ಹೋಗಿ ಅವರ ಹರಕೆ ಈಡೇರಿದಾಗ ಜಾತ್ರಾ ದಿನ ಗಂಗೆಸೀತಾಳದಲ್ಲಿ ಪಾಲ್ಗೊಂಡು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಮುಟ್ಟಿಸುತ್ತಾರೆ. ಜಾತ್ರಾದಿನ ರಾತ್ರಿ 10:00 ಘಂಟೆಗೆ ಸುಪ್ರಸಿಧ್ಧ ಗೀಗೀ
ಪದಗಳ ಕಾರ್ಯಕ್ರಮವಿರುತ್ತದೆ ಎಂದು ಜಾತ್ರಾ
ಕಮೀಟಿ ಪ್ರಕಟಣೆ ತಿಳಿಸಿದೆ.