ವಿಜಯಪುರ : ಗಣೇಶ ಉತ್ಸವದಲ್ಲಿ ಇತಿಮಿತಿಗಳಲ್ಲಿ ಡಿಜೆ ಸೌಂಡ್ ಬಳಕೆ ಮಾಡಬೇಕು ಎಂದು ಎಸ್ಪಿ ಎಚ್‌ಡಿ ಆನಂದಕುಮಾರ ಮಾಹಿತಿ ನೀಡಿದರು. ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಪ್ರತಿಯೊಬ್ಬರು ಡಿಜೆ ಸೌಂಡ್ ಬಳಕೆ ಮಾಡಬೇಕು. ಅಲ್ಲದೇ, ಶಬ್ದ ಮಾಲಿನ್ಯ ಆಗದಂತೆ ಎಲ್ಲಾ ನೋಡಿಕೊಳ್ಳಬೇಕು. ಅಲ್ಲದೇ, ಜಿಲ್ಲಾದ್ಯಂತ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಆಯೋಜಕರು ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು. ಅದಕ್ಕಾಗಿ ಸಾರ್ವಜನಿಕರ ಸಹಕರಿಸಬೇಕು ಎಂದು ಮನವಿ ಮಾಡಿದರು.