ಮಸ್ಕಿ: ತ್ರಿವಿಧ ದಸೋಹಿ, ನಡೆದಾಡುವ ದೇವರ ಡಾ. ಶಿವಕುಮಾರ ಸ್ವಾಮೀಜಿಗಳ 115 ನೇ ಜನ್ಮ ಜಯಂತಿಯ ಅಂಗವಾಗಿ ಪ್ರಕೃತಿ ಫೌಂಡೇಶನ್ (ರಿ) ಮಸ್ಕಿ ವತಿಯಿಂದ ಉಟಕನೂರು ಶ್ರೀ ಅಡವಿಸಿದ್ದೇಶ್ವರ ಶ್ರೀಗಳ ಮಠದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಪರಮಪೂಜ್ಯ ಶ್ರೀ ಮರಿ ಬಸವರಾಜ ದೇಶಿಕೇಂದ್ರ ಊಟಕನೂರ್ ಶ್ರೀಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ಪಕ್ಷಿಗಳಿಗೆ ನೀರುಣಿಸುವ ಅರವಟ್ಟಿಗೆ ಕಟ್ಟುವುದರ ಜೊತೆಗೆ 115 ಸಸಿಗಳನ್ನು ವಿತರಿಸಲಾಯಿತು.
ಇನ್ನು ಪರಮಪೂಜ್ಯ ಶ್ರೀ ಮರಿ ಬಸವರಾಜ ದೇಶಿಕೇಂದ್ರ ಊಟಕನೂರ್ ಶ್ರೀಗಳು ಕಾರ್ಯಕ್ರಮಕ್ಕೆ ನೀಡಿದರು.
ಪಕ್ಷಿಗಳಿಗೆ ನೀರುಣಿಸುವ ಅರವಟ್ಟಿಗೆ ಕಟ್ಟುವುದರ ಜೊತೆಗೆ 115 ಸಸಿಗಳನ್ನು ಭಕ್ತರಿಗೆ ನೀಡಿ, ಪ್ರತಿಯೊಬ್ಬರು ಸಸಿಗಳನ್ನು ಬೆಳೆಸಿ ಪರಿಸರವನ್ನು ಕಾಪಾಡಿ ಎಂದು ತಿಳಿಹೇಳಿ ಸಸಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಕೃತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಶಿವಮೂರ್ತಿ ಗದ್ದಗಿಮಠ , ಗುಂಡಪ್ಪ ವಿಶ್ವಕರ್ಮ, ರಂಗನಾಥ್ ನಂದಪ್ಪ ಪಾಂಡು ಸೇರಿದಂತೆ ಫೌಂಡೇಶನ್ನಿನ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.