ರಾಯಚೂರು: ದೇಶದಲ್ಲಿ ಆಡಳಿತರೂಢ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಕೈಬಿಟ್ಟು ಬೆಲೆ ಏರಿಕೆ ನಿಯಂತ್ರಿಸಲು ಆಗ್ರಹಿಸಿ ಮಾ.12, ಜಿಲ್ಲಾ ಮಟ್ಟದ ಕಾರ್ಮಿಕ ಸಮಾವೇಶ ನಡೆಸಲಾಗುತ್ತದೆ ಎಂದು ಕಾರ್ಮಿಕ ಸಂಘಗಳ ಮುಖಂಡರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ ಮತ್ತು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎನ್.ಎಸ್. ವೀರೇಶ ಹೇಳಿದರು. ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮಾ. ೨೮ ಮತ್ತ ೨೯ ರಂದು ಸಾರ್ವತ್ರಿಕ ಮುಷ್ಕರ ನಡೆಸಲಾಗುತ್ತದೆ.
ಇದರ ಭಾಗವಾಗಿ ಜಿಲ್ಲೆಯಲ್ಲಿ ಸಮಾವೇಶ ನಡೆಸಲಾಗುತ್ತೆದೆ. ರಾಜ್ಯ ವಿಧಾನ ಸಭೆಯಲ್ಲಿ ಜನಪ್ರತಿನಿಧಿಗಳು ತಮ್ಮ ಗೌರವ ಧನ ಲಕ್ಷಾಂತರು ರೂ ಹೆಚ್ಚಿಸಿಕೊಂಡಿದ್ದಾರೆ. ಆದರೆ ಕಾರ್ಮಿಕರ ವೇತನ ಹೆಚ್ಚಳದಲ್ಲಿ ಮಾತ್ರ ಯಾವುದೆ ಕ್ರಮ ಕೈಕೊಂಡಿಲ್ಲ. ಕನಿಷ್ಟ ವೇತನ ಮಾಸಿಕ ೨೧ ಸಾವಿರ ನಿಗದಿಯಾಗಬೇಕು ಎಂದು ಈ ಹಿಂದೆ ಒತ್ತಾಯಿಸಲಾಗಿತ್ತು. ಈಗ ಈ ವೇತನವನ್ನು ೨೪ ಸಾವಿರ ರೂ ನಿಗದಿಗೆ ಸಂಘಟನೆ ಒತ್ತಾಯಿಸುವುದಾಗಿ ಎನ್.ಎಸ್ ವೀರೇಶ ಅವರು ತಿಳಿಸಿದರು.
ಅಗತ್ಯ ವಸ್ತುಗಳ ಬೆಲೆ ಮತ್ತು ಇಂಧನ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಇದರಿಂದ ಜನ ಸಾಮಾನ್ಯರ ಮೇಲೆ ತೀವ್ರ ಹೊರೆಯಾಗಿದ್ದು ಇದಕ್ಕೆ ಕೇಂದ್ರ ಸರಕಾರ ಕಡಿವಾಣ ಹಾಕುವಂತೆ ಒತ್ತಾಯಿಸಲಾಗತ್ತದೆ. ಕೇಂದ್ರ ಬಿಜೆಪಿ ಸರಕಾರ ಸಂಸದನಲ್ಲಿ ೪೪ ಕಾರ್ಮಿಕ ಕಾಯ್ದೆಗಳನ್ನು ತಿದ್ದು ಪಡಿ ಮಾಡಿ ೪ ಕಾಯ್ದೆಗಳಿಗೆ ಸೀಮಿತಗೊಳಸಿದೆ. ಮಾಲಿಕರು ತಮ್ಮ ಮನ ಬಂದಂತೆ ಕಾರ್ಮಿಕರನ್ನು ತೆಗೆಯುವ ಅಧಿಕಾರಿ ನೀಡಲಾಗಿದೆ. ಈ ಕಾರ್ಮಿಕ ವಿರೋಧಿ ಕಯ್ದೆಗಳನ್ನು ಹಿಂಪಡೆಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕ ರಂಗವನ್ನು ಖಾಸಗಿಕರಣಗೊಳಿಸುವ ಕೇಂದ್ರ ಜನ ವಿರೋಧಿ ನೀತಿಯನ್ನು ತಡೆಯಲು ಈ ಮುಷ್ಕರ ನಡೆಸಲಾಗುತ್ತೆ ಎಂದು ಹೇಳಿದರು.