ಜಿಲ್ಲಾ ಮಟ್ಟದ ಅನುಪಮಾ ಸೇವಾ ಪ್ರಶಸ್ತಿ ವಿಜೇತೆ ಭಾಗ್ಯಜ್ಯೋತಿ
ಇಂಡಿ: ನಾರಿಯರನ್ನು ಪೂಜಿಸುವ ಸ್ಥಳದಲ್ಲಿ ದೇವತೆಗಳು ವಾಸಿಸುತ್ತಾರೆ ಎಂದು ಹಿಂದೂ ಸಂಸ್ಕೃತಿಯ ಪುರಾಣ, ಪ್ರವಚನಗಳಲ್ಲಿ ಕೇಳುತ್ತೇವೆ. ಅದರಂತೆ ಇಂದು ದೇಶದ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅವಳ ಬಳಿ ಅಘಾದವಾದ ಶಕ್ತಿಯಿದೆ ಎನ್ನುವದನ್ನು ತೋರಿಸಿಕೊಟ್ಟಿದ್ದಾಳೆ ಎಂದು ತಾಲ್ಲೂಕು ಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟದ ಅನುಪಮಾ ಸೇವಾ ಪ್ರಶಸ್ತಿ ವಿಜೇತೆ ಭಾಗ್ಯಜ್ಯೋತಿ ಭಗವಂತಗೌಡರ ಅಭಿಪ್ರಾಯಪಟ್ಟರು.
ಅವರು ಶನಿವಾರ ಪಟ್ಟಣದ ಸಕ್ಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇಂದಿನ ಸರ್ಕಾರ ಮಹಿಳೆಯರಿಗೆ ಸಾಕಷ್ಟು ಸಹಾಯ ಸೌಲಭ್ಯಗಳನ್ನು ನೀಡಿದೆ. ಅವನ್ನು ಬಳಸಿಕೊಂಡು ಮಹಿಳೆಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿರ್ಭೀತಿಯಿಂದ ಕೆಲಸ ಮಾಡಿ, ಎಲ್ಲಾ ಕೆಲಸಕ್ಕೂ ಕೂಡಾ ನಾವು ಸಮರ್ಥರು ಎನ್ನುವದನ್ನು ತೋರಿಸಿಕೊಡಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಶಂಕರ ಮೂರ್ತಿ, ಜ್ಯೋತಿ ಸನತ್, ಅವಿನಾಶ ಗಿರಡಿಮಠ, ಸಿದ್ದು ಕಾಂಬಳೆ ಇದ್ದರು. ಮುರುಘೇಂದ್ರ ಶ್ರೀಗಳು ಆಶಿರ್ವಚನ ನೀಡಿದರು.
ಇಂಡಿ: ಪಟ್ಟಣದ ಸಕ್ಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಶಿಕ್ಷಕಿ ಭಾಗ್ಯಜ್ಯೋತಿ ಭಗವಂತಗೌಡರಿಗೆ ಮುರುಘೇಂದ್ರ ಶ್ರೀಗಳು ಸನ್ಮಾನಿಸಿದರು.