ಜಿಲ್ಲೆಯ ಕೋಲ್ಹಾರ ಪಟ್ಟಣಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ಪರಿಶೀಲನೆ
ವಿಜಯಪುರ, ಮೇ.15 :ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಜಿಲ್ಲೆಯ ಕೋಲ್ಹಾರ ಪಟ್ಟಣಕ್ಕೆ ಬುಧವಾರ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲನೆ ಹಾಗೂ ಕೊಲ್ಹಾರ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೊಲ್ಹಾರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.
ಈ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದ ಅವರು, ವಿವಿಧ ಕಾಮಗಾರಿಗಳಾದ ನಮ್ಮ ಕ್ಲಿನಿಕ್ ಕಟ್ಟಡ,ಪಾಲಿಟೆಕ್ನಿಕ್ ಕಾಲೇಜ್, ಇಂದಿರಾ ಕ್ಯಾಂಟಿನ, ಒಳಚರಂಡಿ ಶುದ್ಧೀಕರಣ ಘಟಕ, ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿ ವಿಕ್ಷಣೆ ಮಾಡಿದರು.
ನಂತರ ಆಶ್ರಯ ಕಾಲನಿ ಪ್ರದೇಶಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅತಿಕ್ರಮಣ ಮಾಡಿದ ಪ್ರದೇಶವನ್ನು ತೆರವು ಮಾಡಲು ಪುನರ್ ವಸತಿ ಕೆಂದ್ರದ ಪುನರ್ ವಸತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೊಲ್ಹಾರ ಪಟ್ಟಣ ಪಂಚಾಯತಿ ಸೂಚಿತ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಈ ಕುರಿತು ರೋಣಿಹಾಳ ಗ್ರಾಮದ ಹತ್ತಿರ ಇರುವ ಸರಕಾರದ ಜಾಗೆಯನ್ನು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ವಿಜಯಪುರ ಉಪವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ.ಸೌದಗರ್,ಕೋಲ್ಹಾರ ತಹಶೀಲ್ದಾರರಾದ ನಾಯಕಲ್ ಮಠ,ಪಟ್ಟಣ ಪಂಚಾಯತ, ಮುಖ್ಯಾಧಿಕಾರಿ ವೀರೇಶ ಹಟ್ಟಿ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


















