ಎರಡು ಲಕ್ಷರೂ ಇನ್ಸುರನ್ಸ ವಿತರಣೆ
ಇಂಡಿ : ತಾಲೂಕಿನ ಮಾವಿನಹಳ್ಳಿ ಗ್ರಾಮದ ಬಿಸಿಮಿಲ್ಲಾ ಸೈಪನಸಾಬ ನದಾಫ ಇವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಅಡಿಯಲ್ಲಿ ಪ್ರತಿ ವರ್ಷಕ್ಕೆ ರೂ 436 ರಂತೆ ಮೂರು ವರ್ಷಗಳ ವರೆಗೆ ವಿಮಾ ಪಾಲಸಿ ಕಂತು ಕಟ್ಟಿದ್ದರು.
ಅವರ ಸಹಜ ಸಾವಿನ ನಿಮಿತ್ಯ ಅವರ ಪತಿ ಸೈಪನಸಾಬ
ಇವರಿಗೆ ಎರಡು ಲಕ್ಷ ರೂ ಚೆಕ್ಕನ್ನು ಎಸ್‍ಬಿಐ
ಆವರಣದಲ್ಲಿ ಮ್ಯಾನೆಜರ್ ರಾಮಸ್ವಾಮಿಯವರು
ವಿತರಣೆ ಮಾಡಿದರು. ಎಸ್.ಬಿ.ಐ ಶಾಖಾ ಮುಖ್ಯ ಪ್ರಬಂಧಕ ಬಿ.ಜಿ.ರಾಮಸ್ವಾಮಿ ಮಾತನಾಡಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಅಡಿ ಪ್ರತಿ ವರ್ಷಕ್ಕೆ 436 ರೂ ಕಟ್ಟಿದರೆ ಅವರ ಸಹಜ ಅಥವಾ ಯಾವದೇ ತರಹದ ಸಾವು ಆದರೆ ಅವರ ನಾಮ ನಿರ್ದೇಶಕರಿಗೆ ಎರಡು ಲಕ್ಷ ಮತ್ತು ಪಿಎಮ್‍ಎಸ್‍ಬಿವೈ ಯೋಜನೆ ಅಡಿ ಪ್ರತಿ ವರ್ಷ ರೂ 20 ಕಟ್ಟಿದರೆ ಅಪಘಾತ ಉಂಟಾದರೆ ಅವರ ನಾಮ ನಿರ್ದೇಶಕರಿಗೆ ಎರಡು ಲಕ್ಷ ರೂ ಮತ್ತು ಎರಡು ಇನ್ಸುರೆನ್ಸ ಮಾಡಿದರೆ ನಾಲ್ಕು ಲಕ್ಷ ರೂ ಬರುತ್ತದೆ ಎಂದರು.
ಮಹಾಂತೇಶ ಡೊಳ್ಳಿ, ಪರಶುರಾಮ ತೆನೆಹಳ್ಳಿ,
ಎಫ್‍ಎಲ್‍ಸಿ ಭರತೇಶ ಉಪಾಧ್ಯ, ಮದರ ಸಂಸ್ಥೆಯ
ಸಿಎಫ್‍ಎಲ್ ಮಹಾದೇವಿ ಯರಗಟ್ಟಿ, ವತನ ಚವ್ಹಾಣ
ಮತ್ತಿತರಿದ್ದರು.
ಇಂಡಿ ಪಟ್ಟಣದ ಎಸ್‍ಬಿಐ ದಲ್ಲಿ ರೂ ಎರಡು ಲಕ್ಷದ
ಇನ್ಸುರೆನ್ಸ ಸೈಪನಸಾಬ ಇವರಿಗೆ
ರಾಮಸ್ವಾಮಿಯವರು ವಿತರಿಸಿದರು.