ಸಿಂಧನೂರ: ಪಟ್ಟಣದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ “ಆಶಾಕಿರಣ ಅನಾಥ ಹಾಗೂ ಬಡ ಮಕ್ಕಳ ಆಶ್ರಮ”ದಲ್ಲಿ ಪೂಜ್ಯ ಶ್ರೀಮಲ್ಲಯ್ಯ ಅಪ್ಪಾಜಿ ಪಟ್ಟದೊಡೆಯರು ಗೋನಾಳ ರವರ 32 ನೇ ಹುಟ್ಟುಹಬ್ಬದ ನಿಮಿತ್ಯ ಪೂಜ್ಯ ಅಪ್ಪಾಜಿಯವರ ಸ್ನೇಹ ಬಳಗದ ವತಿಯಿಂದ ಆಶ್ರಮದ ಮಕ್ಕಳಿಗೆ ಉಚಿತ ನೋಟು ಬುಕ್ ಮತ್ತು ಪೆನ್ನು ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪೂಜ್ಯ ಅಪ್ಪಾಜಿ ಗೋನಾಳ, ಶ್ರೀನಿವಾಸ್ ಭಂಗಿ ಉಪ ನೋಂದಣಿ ಅಧಿಕಾರಿಗಳು ಸಿಂಧನೂರು, ಮಲ್ಲಿಕಾರ್ಜುನ್ ಗ್ರಾಂ ಪಂ ಸದಸ್ಯರು, ವಿರೇಂದ್ರ ಶೇಟ್ಟಿ, ಸಿದ್ದು ಗೋರೆಬಾಳ, ಮೌನೇಶ್ ಕೆ, ಮಾಳು ಜಿನ್ನದ್, ವೆಂಕಟೇಶ್ ಬನ್ನದ, ಅಮರೇಶ್, ನಾಗರಾಜ್ ಬಾಲಿ, ಲಕ್ಷ್ಮಣ ಮಂಜು ಕರಡಿ ಮತ್ತು ಇನ್ನಿತರ ಸ್ನೇಹಿತರು ಹಾಗೂ ಆಶ್ರಮದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.